ಚಿನ್ನ, ಬೆಳ್ಳಿ ಬೆಲೆ ಏರಿಕೆ: ಇಲ್ಲಿದೆ ದರಪಟ್ಟಿ

- Advertisement -

ಬೆಂಗಳೂರು: ಚಿನ್ನದ ಬೆಲೆ ಏರಿಕೆ ಈ ವಾರವೂ ಮುಂದುವರಿದಿದೆ. ಚಿನ್ನದ ಜೊತೆಗೆ ಈ ಬಾರಿ ಬೆಳ್ಳಿ ಬೆಲೆಯೂ ಏರಿಕೆ ಆಗಿದೆ. ಚಿನ್ನದ ಬೆಲೆ ಮೊದಲ ಬಾರಿಗೆ 9,000 ರೂ ಗಡಿ ದಾಟಿ ಹೋಗಿದೆ. ಅಪರಂಜಿ ಚಿನ್ನದ ಬೆಲೆಯೂ ಮೊದಲ ಬಾರಿಗೆ 9,800 ರೂ ಗಡಿ ದಾಟಿದೆ.

- Advertisement -

ಇಂದು ಗ್ರಾಮ್ ​​ಗೆ 70 ರೂನಷ್ಟು ಹೆಚ್ಚಾಗಿದೆ. ಆಭರಣ ಚಿನ್ನದ ಬೆಲೆ 9,015 ರೂ ಆಗಿದೆ. ಬೇರೆ ಕೆಲ ದೇಶಗಳಲ್ಲೂ ಚಿನ್ನದ ಬೆಲೆ ಇಂದು ಸೋಮವಾರ ಹೆಚ್ಚಿದೆ. ಬೆಳ್ಳಿ ಬೆಲೆ ಬಹಳ ದಿನಗಳ ನಂತರ ಏರಿಕೆ ಕಂಡಿದೆ. ಗ್ರಾಮ್ ​​ಗೆ ಒಂದು ರೂನಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಬೆಲೆ 101 ರೂ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ ​ನ 22 ಕ್ಯಾರಟ್ ಚಿನ್ನದ ಬೆಲೆ 90,150 ರುಪಾಯಿ ಇದೆ. 24 ಕ್ಯಾರಟ್​ ನ ಅಪರಂಜಿ ಚಿನ್ನದ ಬೆಲೆ 98,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 90,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,100 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 21ಕ್ಕೆ)
22 ಕ್ಯಾರಟ್​ ನ 10 ಗ್ರಾಂ ಚಿನ್ನದ ಬೆಲೆ: 90,150 ರೂ
24 ಕ್ಯಾರಟ್ ​ನ 10 ಗ್ರಾಂ ಚಿನ್ನದ ಬೆಲೆ: 98,350 ರೂ
18 ಕ್ಯಾರಟ್​ ನ 10 ಗ್ರಾಂ ಚಿನ್ನದ ಬೆಲೆ: 73,760 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ

- Advertisement -

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

22 ಕ್ಯಾರಟ್ ​ನ 10 ಗ್ರಾಂ ಚಿನ್ನದ ಬೆಲೆ: 90,150 ರೂ
24 ಕ್ಯಾರಟ್ ​ನ 10 ಗ್ರಾಂ ಚಿನ್ನದ ಬೆಲೆ: 98,350 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ

- Advertisement -


Must Read

Related Articles