Home ಟಾಪ್ ಸುದ್ದಿಗಳು ಗೋದ್ರಾ ಹತ್ಯಾಕಾಂಡ: ಮುಸ್ಲಿಮರ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ: 26 ಆರೋಪಿಗಳು ಖುಲಾಸೆ

ಗೋದ್ರಾ ಹತ್ಯಾಕಾಂಡ: ಮುಸ್ಲಿಮರ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ: 26 ಆರೋಪಿಗಳು ಖುಲಾಸೆ

ಅಹ್ಮದಾಬಾದ್: 2002ರ ಗುಜರಾತ್ ಗೋದ್ರಾ ಹತ್ಯಾಕಾಂಡ ಸಂದರ್ಭದಲ್ಲಿ ಕಲೋಲ್ ಎಂಬಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಎಲ್ಲಾ 26 ಆರೋಪಿಗಳನ್ನು ಗುಜರಾತ್’ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.


ಪ್ರಕರಣದ 39 ಆರೋಪಿಗಳ ಪೈಕಿ 13 ಆರೋಪಿಗಳು ಪ್ರಕರಣದ ವಿಚಾರಣೆಯ ಸಮಯದಲ್ಲಿ ಮೃತಪಟ್ಟಿದ್ದರು. ಅವರ ವಿರುದ್ಧದ ವಿಚಾರಣೆಯನ್ನು ಈ ಹಿಂದೆಯೇ ರದ್ದುಗೊಳಿಸಲಾಗಿತ್ತು. ಇದೀಗ ಪಂಚಮಹಲ್ ಜಿಲ್ಲೆಯ ಕಲೋಲ್’ನಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಲೀಲಾಭಾಯಿ ಚುಡಾಸಮಾ ಅವರು ಇನ್ನುಳಿದ 26 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಖುಲಾಸೆ ಮಾಡಿದ್ದಾರೆ.

Join Whatsapp
Exit mobile version