ಗೋವಾ: ಕಾಂಗ್ರೆಸ್ ನಲ್ಲಿ ಕಾಳಗ; ಕೈ ಶಾಸಕರು ಕಮಲ ಪಾಳಯಕ್ಕೆ

Prasthutha|

ಪಣಜಿ: ಗೋವಾ ಕಾಂಗ್ರೆಸ್ ನ ಆರು ಶಾಸಕರು  ಬಿಜೆಪಿಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದು, ಮತ್ತೊಂದು ಆಪರೇಷನ್ ಕಮಲದ ನಿರೀಕ್ಷೆಗಳು ನಿಜವಾಗುವ ಸಾಧ್ಯತೆಗಳಿವೆ.

- Advertisement -

ಹನ್ನೊಂದು ಮಂದಿ ಶಾಸಕರ ಪೈಕಿ 6 ಮಂದಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದು, ಬಿಜೆಪಿ ಸರ್ಕಾರದ ಎರಡನೇ ಅವಧಿ ಆರಂಭವಾಗಿ ಕೇವಲ ನಾಲ್ಕು ತಿಂಗಳಲ್ಲಿ ಈ ಮಹತ್ವದ ಬೆಳವಣಿಗೆ ಸಂಭವಿಸಿದೆ.

ಮಾಜಿ ಸಿಎಂ ದಿಗಂಬರ ಕಾಮತ್ ಅವರ ನೇತೃತ್ವದ ಗುಂಪು, ಪಕ್ಷಾಂತರ ನಿಷೇಧ ಕಾಯ್ದೆಯ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅಗತ್ಯವಾದ ಮೂರನೇ ಎರಡರಷ್ಟು ಬಹುಮತ ಪಡೆಯಲು ವಿಫಲವಾಗಿದೆ. ಆದರೆ ಕಾಮತ್ ಗುಂಪಿಗೆ ಇನ್ನಷ್ಟು ಮಂದಿ ಸೇರುವ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿಲ್ಲ. ಇದೀಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರು ರಾಜ್ಯಸಭಾ ಸದಸ್ಯ ಮುಕುಲ್ ವಾಸ್ನಿಕ್ ಅವರನ್ನು ಗೋವಾಗೆ ಕಳುಹಿಸಿಕೊಟ್ಟಿದ್ದಾರೆ.

- Advertisement -

ಚುನಾವಣೆಯ ಸಂದರ್ಭದಲ್ಲಿ, ಆಯ್ಕೆಯಾದ ಬಳಿಕ ಬಜೆಪಿ ಸೇರುವುದಿಲ್ಲ ಎಂದು ತನ್ನ ಅಭ್ಯರ್ಥಿಗಳಿಂದ ಕಾಂಗ್ರೆಸ್ ಪಕ್ಷದ ಅಫಿಡವಿಟ್ ಪಡೆದಿತ್ತು. ಈ ದಿಢೀರ್ ಬೆಳವಣಿಗೆ ಹಿನ್ನೆಲೆಯಲ್ಲಿ ಪಕ್ಷದ ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರು, ಕಾಮತ್ ಬಣದ ಮೈಕೆಲ್ ಲೋಬೊ ಅವರನ್ನು ವಿರೋಧ ಪಕ್ಷದ ನಾಯಕ ಸ್ಥಾನದಿಂದ ವಜಾಗೊಳಿಸಿದ್ದಾರೆ.

Join Whatsapp
Exit mobile version