ತಮಿಳುನಾಡಿನ ಚುನಾವಣಾ ಪ್ರಚಾರಕ್ಕಾಗಿ ಇಂದು ಮೋದಿ ತಮಿಳುನಾಡಿಗೆ ಆಗಮಿಸಲಿದ್ದು, ಈ ವೇಳೆ ನೆಟ್ಟಿಗರು #GoBackModi ಎಂಬ ಹ್ಯಾಶ್ ಟ್ಯಾಗನ್ನು ಟ್ವಿಟ್ಟರಿನಲ್ಲಿ ಟ್ರೆಂಡ್ ಮಾಡುವ ಮೂಲಕ ವಿಶಿಷ್ಟವಾಗಿ ಮೋದಿಯನ್ನು ದ್ರಾವಿಡ್ ನೆಲಕ್ಕೆ ಸ್ವಾಗತ ಕೋರಿದ್ದಾರೆ. ಟ್ವಿಟ್ಟರ್ ಅಭಿಯಾನ ಪ್ರಾರಂಭಿಸಿದ ಗಂಟೆಗಳಲ್ಲಿ ಇದು ಭಾರತದಲ್ಲಿ ಮೊದಲ ಸ್ಥಾನದಲ್ಲಿ ಟ್ರೆಂಡ್ ಆಗಿ ಕಾಣಿಸಿಕೊಂಡಿತು. ಸುಮಾರು ಒಂದು ಲಕ್ಷದ 80 ಸಾವಿರದಷ್ಟು ಟ್ವೀಟ್ ಗಳು ಈ ವೇಳೆ ದಾಖಲಿಸಲ್ಪಟ್ಟಿದೆ. ಅದು ಇನ್ನೂ ಮುಂದುವರಿಯುತ್ತಲಿದ್ದು, ಅದರ ಅಂಕಿ ಸಂಖ್ಯೆಗಳು ಏರುತ್ತಲೇ ಇದೆ ಎನ್ನಲಾಗಿದೆ. ಭಾರತದಲ್ಲಿ ಈ ಹ್ಯಾಶ್ ಟ್ಯಾಗ್ ಹಲವು ಗಂಟೆಗಳಷ್ಟು ಕಾಲ ಮೊದಲ ಸ್ಥಾನದಲ್ಲಿಯೇ ಮುಂದುವರಿಯುತ್ತಿದೆ.
ತಮಿಳುನಾಡಿನ ಧರ್ಮಾಪುರಂ ಹಾಗೂ ಪುದುಚೇರಿಯಲ್ಲಿ ಇಂದು ಮೋದಿ ಚುನಾವಣಾ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿಕ್ಕಿದ್ದಾರೆ. ಈ ವೇಳೆ ನೆಟ್ಟಿಗರು ಮೋದಿ ವಿರುದ್ಧ ಟ್ವಿಟ್ಟರಿನಲ್ಲಿ ಅಭಿಯಾನ ಕೈಗೊಂಡಿದ್ದು, ಅದಕ್ಕೆ ಭಾರೀ ಸ್ಪಂದನೆ ದೊರಕಿದೆ. ಟ್ವಿಟ್ಟರಿಗರು ಸಾಮಾಜಿಕ ತಾಣಗಳ ಮೂಲಕವೇ ಮೋದಿಗೆ ಬಿಸಿ ಮುಟ್ಟಿಸಿದ್ದು, ತಮಿಳುನಾಡಿನ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.
ಹಲವು ಟ್ವಿಟ್ಟರ್ ಖಾತೆದಾರರು ಈ ಹ್ಯಾಶ್ ಟ್ಯಾಗ್ ಬಳಸಿ ಮಾರ್ಮಿಕವಾಗಿ ಟ್ವೀಟ್ ಮಾಡುತ್ತಾ ಮೋದಿ ಕಾಲೆಳೆದಿದ್ದಾರೆ.