Home ಟಾಪ್ ಸುದ್ದಿಗಳು ಜ್ಞಾನವಾಪಿ ಮಸ್ಜಿದ್: ನ್ಯಾಯಾಲಯಕ್ಕೆ ಸರ್ವೇ ವರದಿ ಸಲ್ಲಿಸಿದ ASI

ಜ್ಞಾನವಾಪಿ ಮಸ್ಜಿದ್: ನ್ಯಾಯಾಲಯಕ್ಕೆ ಸರ್ವೇ ವರದಿ ಸಲ್ಲಿಸಿದ ASI

ವಾರಣಾಸಿ: ಜ್ಞಾನವಾಪಿ ಮಸ್ಜಿದ್ ಆವರಣದಲ್ಲಿ ನಡೆಸಿದ ಸಮೀಕ್ಷೆಯ ವರದಿಯನ್ನು ಎಎಸ್‌ಐ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದೆ. ಬಿಳಿ ಬಟ್ಟೆಯಲ್ಲಿ ಸುತ್ತಿದ ವರದಿಯನ್ನ ಪ್ರಸ್ತುತಪಡಿಸಿದೆ.

ಎಎಸ್‌ಐ ಈ ಸಮೀಕ್ಷೆ ಕಾರ್ಯವನ್ನ ಜುಲೈ 24ರಂದು ಪ್ರಾರಂಭಿಸಿತ್ತು. ಡಿಸೆಂಬರ್ 11, 2023ರಂದು ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಅವಿನಾಶ್ ಮೊಹಾಂತಿಯ ಅನಾರೋಗ್ಯದ ಕಾರಣದಿಂದಾಗಿ ಅವರು ನ್ಯಾಯಾಲಯಕ್ಕೆ ಹಾಜರಾಗಿ ವರದಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ, ಕಾಲಾವಕಾಶ ಬೇಕು ಎಂದು ಎಎಸ್‌ಐ ಹೇಳಿತ್ತು. ವಾರಣಾಸಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯ ಇನ್ನೂ ಒಂದು ವಾರ ಕಾಲಾವಕಾಶ ನೀಡಿತ್ತು. ಆದರೆ ವರದಿಯನ್ನು ಸಲ್ಲಿಸಲು ಡಿಸೆಂಬರ್ 18ರ ದಿನಾಂಕವನ್ನು ಗಡುವು ಆಗಿ ನಿಗದಿಪಡಿಸಿತ್ತು.

Join Whatsapp
Exit mobile version