ರಾಮಮಂದಿರ ಉದ್ಘಾಟನೆ ಸಂತೋಷ, ಹಾಗೆ ಜನರಿಗೆ 15 ಲಕ್ಷ ಹಣ ಹಾಕಿ: ಮೋದಿ ವಿರುದ್ಧ ವಿಶ್ವನಾಥ್ ಕಿಡಿ

Prasthutha|

ಮೈಸೂರು: ರಾಮಮಂದಿರ ಉದ್ಘಾಟನೆಯಾಗಿದೆ, ಜನರು ಬಹಳ ಸಂತೋಷವಾಗಿದ್ದಾರೆ. ಪ್ರಧಾನಿ ಮೋದಿ 500 ವರ್ಷಗಳ ಸಮಸ್ಯೆಯನ್ನ ಬಗೆಹರಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು.

- Advertisement -

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಕಷ್ಟಗಳಿಗೆ ಮೋದಿ ಇವಾಗಲಾದರು ಸ್ಪಂದಿಸಬೇಕು. ಚುನಾವಣೆಗೂ ಮುನ್ನ ಪ್ರತಿಯೊಬ್ಬರಿಗೆ 15 ಲಕ್ಷ ಕೊಡುತ್ತೇನೆ ಅಂದಿದ್ರಿ. ಆದಷ್ಟು ಬೇಗ ಹಣವನ್ನ ಹಾಕಿ. ಜನರು ಸಾಕಷ್ಟು ಕಷ್ಟದಲ್ಲಿದ್ದಾರೆ. ಎಲ್ಲಾ ವಸ್ತುಗಳಿಗೆ ಜಿಎಸ್ ಟಿ ಕಟ್ಟುತ್ತಿದ್ದಾರೆ. ಅತಿ ಹೆಚ್ಚು ಜಿಎಸ್ ಟಿ ಕಟ್ಟುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದರು.

ನೀರವ್ ಮೋದಿ ಅವರಿಂದ ದೇಶಕ್ಕೆ ಲಕ್ಷಾಂತರ ಕೋಟಿ ನಷ್ಟವಾಗಿದೆ. ಅವರನ್ನು ಬಂಧಿಸಿ ಕರೆತರುತ್ತೇನೆ ಅಂದ್ರು.ಅದು ಸಹ ಸಾಧ್ಯವಾಗಿಲ್ಲ ಎಂದು ಮಾತಿನಲ್ಲೇ ಕುಟುಕಿದರು



Join Whatsapp