ಪಕ್ಷದ ಅಧ್ಯಕ್ಷ ಸ್ಥಾನ, 50% ಟಿಕೆಟ್​​ ಮುಸ್ಲಿಂ ಸಮುದಾಯಕ್ಕೆ ನೀಡಿ: ಕಾಂಗ್ರೆಸ್​ಗೆ ಪ್ರಧಾನಿ ಮೋದಿ ಸವಾಲು

- Advertisement -

ಹಿಸಾರ್(ಹರಿಯಾಣ): ಕಾಂಗ್ರೆಸ್‌ಗೆ ನಿಜವಾಗಿಯೂ ಮುಸ್ಲಿಮರ ಬಗ್ಗೆ ಸಹಾನುಭೂತಿ ಇದ್ದರೆ, ಪಕ್ಷದ ಅಧ್ಯಕ್ಷರನ್ನಾಗಿ ಆ ಸಮುದಾಯದ ನಾಯಕನನ್ನು ನೇಮಿಸಲಿ ಮತ್ತು ಚುನಾವಣೆಗಳಲ್ಲಿ ಶೇಕಡಾ 50 ರಷ್ಟು ಟಿಕೆಟ್‌ಗಳನ್ನು ಆ ಸಮುದಾಯದ ಅಭ್ಯರ್ಥಿಗಳಿಗೇ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸವಾಲು ಹಾಕಿದರು.

- Advertisement -

ಕಾಂಗ್ರೆಸ್​ ಎಂದಿಗೂ, ಯಾರಿಗೂ ಪ್ರಯೋಜನವಾಗದ ‘ಮಧ್ಯಂತರ ನೀತಿ’ಯನ್ನು ಅನುಸರಿಸುತ್ತದೆ. ಪಕ್ಷವು ಚುನಾವಣೆಗಳಲ್ಲಿ ಗೆದ್ದ ಬಳಿಕ ಮತ್ತು ಅದಕ್ಕೂ ಮೊದಲಿನ ನಡವಳಿಕೆಯು ಒಂದೇ ಆಗಿರುವುದಿಲ್ಲ ಎಂದು ಟೀಕಿಸಿದರು.

ಮಹಾರಾಜ ಅಗ್ರಸೇನ ವಿಮಾನ ನಿಲ್ದಾಣದಲ್ಲಿ ಇಂದು ಹೊಸ ಟರ್ಮಿನಲ್​​ಗೆ ಅಡಿಪಾಯ ಹಾಕಿ, ಅಯೋಧ್ಯೆಗೆ ವಿಮಾನ ಹಾರಾಟಕ್ಕೆ ಚಾಲನೆ ನೀಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 2013ರಲ್ಲಿ ವಕ್ಫ್ ಕಾನೂನಿನಲ್ಲಿ ಕಾಂಗ್ರೆಸ್ ಮಾಡಿದ ಬದಲಾವಣೆಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು.

- Advertisement -

ಡಾ.ಅಂಬೇಡ್ಕರ್ ಅವರು ಧರ್ಮದ ಆಧಾರದ ಮೇಲೆ ಮೀಸಲಾತಿ ಇರಬಾರದು ಎಂದು ಪ್ರತಿಪಾದಿಸಿದ್ದರು. ಸಂವಿಧಾನದಲ್ಲೂ ಅದಕ್ಕೆ ನಿಷೇಧವಿದೆ. ಆದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಎಸ್‌ಸಿ, ಎಸ್​ಟಿ, ಒಬಿಸಿಗಳ ಮೀಸಲಾತಿಯನ್ನು ಕಸಿದು ಯೋಜನೆಗಳ ಟೆಂಡರ್​​ನಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿದೆ ಎಂದರು.

ಕಾಂಗ್ರೆಸ್ ಮುಸ್ಲಿಂ​ ಸಮುದಾಯದ ಕೆಲವೇ ಕೆಲವು ‘ಮೂಲಭೂತವಾದಿ’ ವ್ಯಕ್ತಿಗಳನ್ನು ಸಂತೋಷಪಡಿಸುವ ನೀತಿಯನ್ನು ಅನುಸರಿಸುತ್ತದೆ. ಒಟ್ಟಾರೆ ಸಮಾಜವನ್ನು ನಿರ್ಲಕ್ಷಿಸಿ, ಅವರನ್ನು ಅನಕ್ಷರಸ್ಥ ಮತ್ತು ಬಡವರಾಗಿಯೇ ಉಳಿಯುವಂತೆ ಮಾಡುತ್ತದೆ ಎಂದು ಆರೋಪಿಸಿದರು. ಇದಕ್ಕೆ ದೊಡ್ಡ ಪುರಾವೆಯೆಂದರೆ, 2014 ರ ಸಾರ್ವತ್ರಿಕ ಚುನಾವಣೆಗೂ ಮೊದಲು ವಕ್ಫ್ ಕಾನೂನಿನಲ್ಲಿ ಮಾಡಿದ ತಿದ್ದುಪಡಿಗಳು ಎಂದು ಉದಾಹರಿಸಿದರು.

ಸ್ವಾತಂತ್ರ್ಯಪೂರ್ವದಿಂದಲೂ ವಕ್ಫ್ ಕಾನೂನು ಇದೆ. 2014ರ ಚುನಾವಣೆಗೂ ಕೆಲ ದಿನಗಳ ಮೊದಲು ಮತ ಬ್ಯಾಂಕ್​ಗಾಗಿ ವಕ್ಫ್​ ಕಾನೂನಿಗೆ ಮಹತ್ತರ ತಿದ್ದುಪಡಿಗಳನ್ನು ತಂದಿತು. ಇದರಿಂದ ಸಮುದಾಯವನ್ನು ಮೆಚ್ಚಿಸಿತು. ಅಂದು ಪಕ್ಷವು ಮಾಡಿದ ಕಾನೂನುಬಾಹಿರ ಬದಲಾವಣೆಗಳು ಸಂವಿಧಾನ ಮತ್ತು ಅಂಬೇಡ್ಕರ್​ ಅವರಿಗೆ ಮಾಡಿದ ದೊಡ್ಡ ಅವಮಾನ ಎಂದು ಮೋದಿ ಕಿಡಿಕಾರಿದರು.

- Advertisement -


Must Read

Related Articles