Home ಟಾಪ್ ಸುದ್ದಿಗಳು ಬೀದಿ ನಾಯಿಗಳ ದಾಳಿಗೆ ಬಾಲಕಿ ಬಲಿ

ಬೀದಿ ನಾಯಿಗಳ ದಾಳಿಗೆ ಬಾಲಕಿ ಬಲಿ

ಭೋಪಾಲ್: ಮಧ್ಯಪ್ರದೇಶದ ಕರ್ಘೋನ್ ನಲ್ಲಿ ಶುಕ್ರವಾರ ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ 5 ವರ್ಷ ಪ್ರಾಯದ ಬಾಲಕಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಕುತ್ತಿಗೆ ಮತ್ತು ದೇಹದ ನಾನಾ ಕಡೆ ನಾಯಿಗಳು ಕಚ್ಚಿದ್ದುದರಿಂದ ಅತಿಯಾದ ರಕ್ತಸ್ರಾವವಾಗಿ ಚಿಕಿತ್ಸೆ ಫಲಿಸದೆ ಬಾಲಕಿ ಸೋನಿಯಾ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ.

ಬೇಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಬಕವಾ ಗ್ರಾಮದಲ್ಲಿ ಈ ದುರಂತ ಘಟನೆ ನಡೆದಿದೆ. ಮನೆಗೆ ಹತ್ತಿರದ ಅಂಗಡಿಯಿಂದ ಬಾಲಕಿ ಅಡುಗೆ ಸಾಮಾನು ತರಲು ಹೋಗುತ್ತಿದ್ದಾಗ ನಿನ್ನೆ ಸಂಜೆ ಆರಕ್ಕೂ ಹೆಚ್ಚು ನಾಯಿಗಳು ಬಾಲಕಿಯ ಮೇಲೆ ಏಕಾಏಕಿ ದಾಳಿ ನಡೆಸಿ ಕಚ್ಚಿವೆ. ಹುಡುಗಿಯ ತಂದೆಯು ಕಾರ್ಮಿಕರಾಗಿದ್ದು ಕೆಲಸದ ಮೇಲೆ ಹೊರಗೆ ಹೋಗಿದ್ದಾಗ ಈ ಘಟನೆ ನಡೆದಿದೆ.

ಬಾಲಕಿಯ ಕೂಗಾಟ ಕೇಳಿ ಹತ್ತಿರದ ಮನೆಯವರು ಓಡಿ ಬಂದು ನಾಯಿಗಳನ್ನು ಓಡಿಸಿದರಾದರೂ ಅದಾಗಲೇ ಹುಡುಗಿಯ ದೇಹದ ನಾನಾ ಭಾಗಗಳನ್ನು ನಾಯಿಗಳು ಕಚ್ಚಿದ್ದವು.

ಕೂಡಲೆ ಆಕೆಯನ್ನು ಬೇಡಿಯಾ ಆಸ್ಪತ್ರೆಗೆ ಒಯ್ಯಲಾಯಿತು. ಆ ಮೇಲೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಒಯ್ಯಲಾಯಿತಾದರೂ ಬಾಲಕಿ ಉಳಿಯಲಿಲ್ಲ ಎಂದು ಸಿವಿಲ್ ಸರ್ಜನ್ ಅನಾರ್ ಸಿಂಗ್ ಚೌಹಾಣ್ ಹೇಳಿದರು.

Join Whatsapp
Exit mobile version