Home ಟಾಪ್ ಸುದ್ದಿಗಳು ಪೋಷಕರು ಬೈದರೆಂದು ಮನೆ ಬಿಟ್ಟು ಹೋದ ಬಾಲಕಿ: ಮಂಗಳೂರಿನ ಹಲವೆಡೆ ಸುತ್ತಾಟ

ಪೋಷಕರು ಬೈದರೆಂದು ಮನೆ ಬಿಟ್ಟು ಹೋದ ಬಾಲಕಿ: ಮಂಗಳೂರಿನ ಹಲವೆಡೆ ಸುತ್ತಾಟ

ಬೆಂಗಳೂರು: ಕಡಿಮೆ ಅಂಕ ತೆಗೆದಿದ್ದಕ್ಕೆ ಪೋಷಕರು ಬೈದರೆಂದು 9ನೇ ತರಗತಿ ಓದುತ್ತಿದ್ದ ಬಾಲಕಿಯೊಬ್ಬಳು ಮನೆಬಿಟ್ಟು ನಾಪತ್ತೆಯಾಗಿರುವ  ಘಟನೆ ನಂದಿನಿ ಲೇಔಟ್ ನಲ್ಲಿ ನಡೆದಿದೆ.

ನಿನ್ನೆ ಸಂಜೆ ಮನೆಯಿಂದ ಟ್ಯೂಷನ್ ಗೆ ತೆರಳಿದ್ದ  14 ವರ್ಷ ಪ್ರಾಯದ ಭಾರ್ಗವಿ ನಂತರ ಟ್ಯೂಷನ್ ಮುಗಿಸಿ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ತೆರಳಿದ್ದಾಳೆ. ಮೆಜೆಸ್ಟಿಕ್ ನಿಂದ ಮಂಗಳೂರು ಬಸ್ ಹತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರಿನಲ್ಲಿ ಬಾಲಕಿಯನ್ನು ಹುಡುಕಲು ಪೊಲೀಸರ ನಾಲ್ಕು ತಂಡಗಳು ಶ್ರಮಿಸುತ್ತಿವೆ.

ಮಂಗಳೂರಿನ ಹಲವೆಡೆ ತಿರುಗಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಸೋಮವಾರ ಬೆಳಗ್ಗಿನ ಜಾವ 3 ಗಂಟೆಗೆ ಮಂಗಳೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಬಂದಿಳಿದ ಬಾಲಕಿ, ಅಲ್ಲಿಂದ ರಿಕ್ಷಾವೊಂದರಲ್ಲಿ ಮುಕ್ಕ ಬೀಚ್ ಗೆ ತೆರಳಿ ಅಲ್ಲಿಂದ ಅದೇ ರಿಕ್ಷಾದಲ್ಲಿ ಕದ್ರಿ ಪಾರ್ಕ್ ಗೆ ಹೋಗಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ರಿಕ್ಷಾ ಚಾಲಕನನ್ನು ಪೊಲೀಸರು ವಿಚಾರಣೆ ನಡೆಸಿ ಬಾಲಕಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Join Whatsapp
Exit mobile version