ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ | ನಾಗಿನ್3 ಖ್ಯಾತಿಯ ನಟ ಸೇರಿ 6 ಮಂದಿ ಬಂಧನ

Prasthutha|

ಮುಂಬೈ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ನಾಗಿನ್ 3 ಖ್ಯಾತಿಯ ನಟ ಪರ್ವ್ ವಿ ಪುರಿ ಸೇರಿ 6 ಮಂದಿಯನ್ನು ಮುಂಬೈ ವಾಲಿವ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

- Advertisement -

ನಾಗಿಣಿ-3, ಬ್ರಹ್ಮರಾಕ್ಷಸ್-2 ಮುಂತಾದ ಧಾರವಾಹಿಗಳಲ್ಲಿ ನಟಿಸಿದ್ದ ಪರ್ವ್ ವಿ. ಪುರಿ ಮತ್ತು ಇತರ ಆರು ಮಂದಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಟ ಸೇರಿದಂತೆ ಇತರರು ತನ್ನ ಮೇಲೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ನೀಡಿದ ದೂರಿನ ಅನ್ವಯ ಮುಂಬೈನ ವಾಲಿವ್ ಪೊಲೀಸ್ ಪರ್ವ್ ವಿ ಪುರಿ ಸೇರಿದಂತೆ 6ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

ಪರ್ಲ್ ವಿ ಪುರಿ ಏಕ್ತಾ ಕಪೂರ್ ಅವರ ನಾಗಿನ್3, ಬೆಪನಾ ಪ್ಯಾರ್ ಮತ್ತು ಬ್ರಹ್ಮರಾಕ್ಷಸ್2 ಸೇರಿದಂತೆ ಹಲವಾರು ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾನೆ. ತಮ್ಮ ನಾಗಿನ್ 3 ಸಹನಟಿ ಕರಿಷ್ಮಾ ತನ್ನಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ ಎಂಬ ವದಂತಿಗಳಿದ್ದು, ಅವರಿಬ್ಬರೂ ತಾವು ಉತ್ತಮ ಸ್ನೇಹಿತರು ಎಂದು ಪದೇ ಪದೇ ಸಮರ್ಥಿಸಿಕೊಂಡಿದ್ದಾರೆ.

2013ರಲ್ಲಿ ದಿಲ್ ಕಿ ನಸರ್ ಸೆ ಖೂಬ್ ಸೂರತ್ ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಪರ್ವ್ ವಿ ಪುರಿ, ಫಿರ್ ಬಿ ನಾ ಮಾನೆ ಮೂಲಕ ಜನಪ್ರಿಯತೆ ಪಡೆದಿದ್ದನು.

Join Whatsapp
Exit mobile version