ಸುಳ್ಯ | ಅಪರೂಪದ ಖಾಯಿಲೆಗೆ ಬಾಲಕಿ ಬಲಿ

Prasthutha|

ಸುಳ್ಯ: ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಸುಳ್ಯದ ಕಲ್ಲುಗುಂಡಿಯ ಬಾಲಕಿ ಜೆಮೀನಾ ಕೆ.ಜಾನ್ ಕೊನೆಗೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಕಾರ್ಮಿಕ ಮುಖಂಡ ಕೆ.ಪಿ.ಜಾನಿ ಎಂಬುವರ ಐದೂವರೆ ವರ್ಷದ ಮಗಳಿಗೆ ಹಿಮೋಫಾಗೊಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ (HLH), ಎಪ್ಸ್ಟೀನ್ ಬಾರ್ ವೈರಸ್ [Hemophagocytic Lymphohistiocytosis (HLH), Epstein Barr Virus (EBV)] ರೋಗವು ಬಾಧಿಸಿತ್ತು.

- Advertisement -


ಬಾಲಕಿಗೆ ಎರಡರಿಂದ ಮೂರು ತಿಂಗಳು ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೂ ರೋಗ ಉಲ್ಬಣಗೊಂಡು ಬಾಯಿ ಮತ್ತು ಮೂಗಿನಲ್ಲಿ ರಕ್ತಸ್ರಾವ ಆರಂಭವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಹೆಬ್ಬಾಳದ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಜೆಮೀನಾಗೆ ಅಸ್ತಿ ಮಜ್ಜೆ(Bone marrow) ಬದಲಾವಣೆ ಮಾಡಬೇಕಾಗಿದ್ದು, ನಿನ್ನೆ ಹಲವರ ನೆರವಿನಿಂದ ಅದನ್ನೂ ಮಾಡಲಾಗಿತ್ತು.‌


ಮುಂದಿನ ಎರಡು ವಾರ ಮಗುವಿಗೆ ಯಾವುದೇ ಸೋಂಕು (infection) ಕಂಡುಬರದಿದ್ದರೆ, ಆರೋಗ್ಯದಲ್ಲಿ ಚೇತರಿಕೆಯಾಗಲಿದೆ. ಈ ಚಿಕಿತ್ಸೆಯ ಬಳಿಕ ಕನಿಷ್ಠ ಎರಡು ವರ್ಷಗಳ ನಂತರ ಬಾಲಕಿಯು ಯಥಾಸ್ಥಿತಿಗೆ ಮರಳಲು ಸಾಧ್ಯವಾಗಬಹುದು ಎಂಬುದಾಗಿ ವೈದ್ಯರು ತಿಳಿಸಿದ್ದರು ಎನ್ನಲಾಗಿದೆ. ಆದರೆ ಜೀವನ್ಮರಣ ಸ್ಥಿತಿಯಲ್ಲೇ ಇದ್ದ ಜೆಮೀನಾ ಮಾತ್ರ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.



Join Whatsapp