ಶಾಲಾ ಬಸ್ ಚಕ್ರದಡಿ  ಸಿಲುಕಿ ಬಾಲಕಿ ಸಾವು;ಬಸ್ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲು

Prasthutha|

ಬೆಂಗಳೂರು: ಶಾಲಾ ಬಸ್ ಚಕ್ರಕ್ಕೆ ಸಿಲುಕಿ ಯುಕೆಜಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಪಿಚ್ಚನಕೆರೆ ಬಳಿ ನಡೆದಿದೆ.

- Advertisement -

ಸಿದ್ದೇನಹಳ್ಳಿಯ ಸ್ವಾಮಿ ಅವರ ಪುತ್ರಿ ಶ್ರೀಸಾಯಿ ಇಂಟರ್ ನ್ಯಾಷನಲ್ ಶಾಲೆಯ ಯುಕೆಜಿ  ವಿದ್ಯಾರ್ಥಿನಿ ರಕ್ಷಿತಾ (6) ಮೃತ ಬಾಲಕಿ. ಚಾಲಕ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಶಾಲಾ ಬಸ್ ನಿಂದ ವಿದ್ಯಾರ್ಥಿನಿ ಕೆಳಗೆ ಬಿದ್ದಿದ್ದು,  ಶಾಲಾ ಬಸ್ ನ ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾಳೆ.

 ಸೋಮವಾರ ಶಾಲೆ ಮುಗಿಸಿ ನಲ್ಲಿ ಬರುವ ವೇಳೆ ಘಟನೆ ನಡೆದಿದೆ. ವಿದ್ಯಾರ್ಥಿನಿ ರಕ್ಷಿತಾ ಬಸ್ ಬಾಗಿಲ ಬಳಿಯ ಸೀಟ್’ನಲ್ಲಿ ಕುಳಿತಿದ್ದಳು. ಇತರ ವಿದ್ಯಾರ್ಥಿಗಳನ್ನು ಇಳಿಸಿ ಮುಂದೆ ಸಾಗಬೇಕಾದರೆ ಶಾಲಾ ಸಿಬ್ಬಂದಿ ಬಸ್ ನ ಬಾಗಿಲು ಹಾಕಿರಲಿಲ್ಲ. ಚಾಲಕ ತಿರುವಿನಲ್ಲಿ ಬ್ರೇಕ್ ಹಾಕಿದ ಸಂದರ್ಭದಲ್ಲಿ ಸೀಟಿನ ಮೇಲೆ ಕುಳಿತಿದ್ದ ವಿದ್ಯಾರ್ಥಿನಿ ಕೆಳಗೆ ಬಿದ್ದಿದ್ದಾಳೆ. ಬಸ್ ನ ಹಿಂದಿನ ಚಕ್ರ ತಲೆಯ ಮೇಲೆ ಹತ್ತಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆ ನಂತರ ಚಾಲಕ ಹಾಗೂ ಸಿಬ್ಬಂದಿ ಪರಾರಿಯಾಗಿದ್ದಾರೆ.  

- Advertisement -

ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp