Home ಟಾಪ್ ಸುದ್ದಿಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡ 251 ಕ್ರಿಶ್ಚಿಯನ್ ಕುಟುಂಬಗಳು!

ಹಿಂದೂ ಧರ್ಮಕ್ಕೆ ಮತಾಂತರಗೊಂಡ 251 ಕ್ರಿಶ್ಚಿಯನ್ ಕುಟುಂಬಗಳು!


ಡ್ಯಾಂಗ್ (ಗುಜರಾತ್): ಗುಜರಾತ್ನ ಡ್ಯಾಂಗ್ ಜಿಲ್ಲೆಯಲ್ಲಿ 251 ಕ್ರಿಶ್ಚಿಯನ್ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.


ಡ್ಯಾಂಗ್ ಜಿಲ್ಲೆಯ ಬುಡಕಟ್ಟು ಪ್ರದೇಶವಾದ ಸಪುತಾರಾದ ನವಗಮ್ ಪ್ರದೇಶದ ಶಿವರುದ್ರ ಹನುಮಾನ್ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್(VHP) ತುಳಸಿ ಪೂಜೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಕ್ರಿಶ್ಚಿಯನ್ 251 ಕುಟುಂಬಗಳು ‘ಜೈ ಶ್ರೀ ರಾಮ್’ ಘೋಷಣೆ ಕೂಗುವ ಮೂಲಕ ಹಿಂದೂ ಧರ್ಮ ಸ್ವೀಕರಿಸಿವೆ.


ಕಾಡುಗಳಿಂದ ಸುತ್ತುವರೆದಿರುವ ಡ್ಯಾಂಗ್‌ನಲ್ಲಿ ಹೆಚ್ಚಿನ ಸಂಖ್ಯೆಯ ಬುಡಕಟ್ಟು ಸಮುದಾಯಗಳು ನೆಲೆಸಿದ್ದು, ಅವರೆಲ್ಲಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು.

Join Whatsapp
Exit mobile version