Home ಕರಾವಳಿ ಸರ್ಕಾರಿ ಶಾಲೆಯ ತರಗತಿಯಲ್ಲೇ ಗಣಹೋಮ !

ಸರ್ಕಾರಿ ಶಾಲೆಯ ತರಗತಿಯಲ್ಲೇ ಗಣಹೋಮ !

ವಿಟ್ಲ: ಶಾಲಾ ಕಾಲೇಜುಗಳಲ್ಲಿ ಸಮಾನತೆ ಇರಬೇಕು. ಯಾವುದೇ ಧರ್ಮದ ಆಚರಣೆ ಇರಬಾರದು ಮತ್ತು ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಚಿಹ್ನೆಗಳನ್ನು ಬಳಸಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ವಿಟ್ಲದ ಪಡಿಬಾಗಿಲು ಶಾಲೆಯಲ್ಲಿ ಗಣಹೋಮ ಪೂಜಾವಿಧಿಯೊಂದಿಗೆ ಶಾಲೆಯನ್ನು ಪ್ರಾರಂಭಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಇಲ್ಲಿನ ಪಡಿಬಾಗಿಲು ಶಾಲೆಯಲ್ಲಿ ಗಣಹೋಮ ಪೂಜಾವಿಧಿಯೊಂದಿಗೆ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಕೇಪು ಗ್ರಾಮ ಪಂಚಾಯತ್ ಸದಸ್ಯ ಜಗಜ್ಜೀವನ್ ರಾಮ್ ಶೆಟ್ಟಿ ಇವರು ಉದ್ಘಾಟಿಸಿದ್ದರು. ಆರತಿ ಬೆಳಗಿ ಸಿಹಿ ಹಂಚಿ ಲೇಖನಿ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಶಾಲಾ ಮಕ್ಕಳನ್ನು ಸ್ವಾಗತಿಸಲಾಯಿತು.

ಸರಕಾರಿ ಶಾಲಾ ಕಾಲೇಜುಗಳಲ್ಲಿ ಸಮಾನತೆ ಬೇಕು. ಯಾವುದೆ ಧಾರ್ಮಿಕ ವಸ್ತ್ರ ಮಾತ್ರ ಧರಿಸಬಾರದು ಎಂಬ ಆದೇಶ ಇದ್ದರೂ ಈ ರೀತಿ ಒಂದು ಧರ್ಮದ ಆಚರಣೆಯನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲೇ ನಡೆಸಿರುವುದ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಶಾಲಾಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Join Whatsapp
Exit mobile version