Home ಟಾಪ್ ಸುದ್ದಿಗಳು ಜರ್ಮನ್ ಸರ್ವಾಧಿಕಾರಿ ಹಿಟ್ಲರ್‌ನ ಕೈಗಡಿಯಾರ ಹರಾಜು; ಬೃಹತ್ ಮೊತ್ತಕ್ಕೆ ಮಾರಾಟ

ಜರ್ಮನ್ ಸರ್ವಾಧಿಕಾರಿ ಹಿಟ್ಲರ್‌ನ ಕೈಗಡಿಯಾರ ಹರಾಜು; ಬೃಹತ್ ಮೊತ್ತಕ್ಕೆ ಮಾರಾಟ

ವಾಷಿಂಗ್ಟನ್: ಅಡಾಲ್ಫ್ ಹಿಟ್ಲರ್‌ನ ಕೈಗಡಿಯಾರವು 1.1 ದಶಲಕ್ಷ ಡಾಲರ್‌ಗೆ (₹ 8.71 ಕೋಟಿ) ಮಾರಾಟವಾಗಿರುವುದಾಗಿ  ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕದ ಚೆಸಾಪೀಕ್ ನಗರದಲ್ಲಿರುವ ಐತಿಹಾಸಿಕ ವಸ್ತುಗಳ ಹರಾಜು ಸಂಸ್ಥೆಯು , ‘ಅಲೆಕ್ಸಾಂಡರ್ ಹಿಸ್ಟಾರಿಕಲ್‌ ಆಕ್ಷನ್ಸ್‌’ ಎಂಬ ಈ ಕೈಗಡಿಯಾರವನ್ನು ‘ಐತಿಹಾಸಿಕ, ಎರಡನೇ ಮಹಾಯುದ್ಧದ ಅವಶೇಷ‘ ಎಂದು ವಿವರಿಸಿದೆ.

ಕೈ ಗಡಿಯಾರದ ಬೆಲೆಯನ್ನು ಹರಾಜು ಸಂಸ್ಥೆಯು 2 ರಿಂದ 4 ದಶಲಕ್ಷ ಮೌಲ್ಯ ನಿಗದಿ ಮಾಡಿತ್ತು. ಆದರೆ, ಯಹೂದಿ ನಾಯಕರು ಮತ್ತು ಇತರರು ಇದು ಯಾವುದೇ ಐತಿಹಾಸಿಕ ಮೌಲ್ಯ ಹೊಂದಿಲ್ಲ ಎಂದು ಆಕ್ಷೇಪ ವ್ಯಕ್ತಡಿಸಿದ್ದರು.ಇದೀಗ ಯುರೋಪಿಯನ್ ಯಹೂದಿಯೊಬ್ಬರು ಕೈಗಡಿಯಾರವನ್ನು ಖರೀದಿಸಿದ್ದಾರೆ ಎಂದು ಹರಾಜು ಸಂಸ್ಥೆಯ ಅಧ್ಯಕ್ಷ ಬಿಲ್ ಪನಾಗೋಪುಲೋಸ್ ತಿಳಿಸಿದ್ದಾರೆ.

ಕೈ ಗಡಿಯಾರವು ಎ ಎಚ್‌ ಎಂಬ ಅಕ್ಷರಗಳನ್ನು ಮತ್ತು ಸ್ವಸ್ತಿಕ್‌ ಸಂಕೇತವನ್ನು ಒಳಗೊಂಡಿದೆ. 1945ರ ಮೇನಲ್ಲಿ ಹಿಟ್ಲರ್‌ ವಿರುದ್ಧ ಜರ್ಮನಿಯ ಬರ್ಚ್‌ಟೆಸ್‌ಗಾಡೆನ್‌ನಲ್ಲಿ ನಡೆದ ಕಾರ್ಯಾಚರಣೆಯ ಮುಂಚೂಣಿ ಘಟಕದಲ್ಲಿದ್ದ ಫ್ರೆಂಚ್ ಸೈನಿಕ ಈ ಕೈಗಡಿಯಾರವನ್ನು ವಶಕ್ಕೆ ಪಡೆದಿದ್ದ ಎಂದು ಹರಾಜು ಸಂಸ್ಥೆ ತಿಳಿಸಿದೆ.

Join Whatsapp
Exit mobile version