Home ಟಾಪ್ ಸುದ್ದಿಗಳು ಭೂ ವಿಜ್ಞಾನಿ ಪ್ರತಿಮಾ ಹತ್ಯೆ: ನಿಜವಾದ ಕಾರಣವೇ ಬೇರೆ

ಭೂ ವಿಜ್ಞಾನಿ ಪ್ರತಿಮಾ ಹತ್ಯೆ: ನಿಜವಾದ ಕಾರಣವೇ ಬೇರೆ

ಬೆಂಗಳೂರು: ಬೆಂಗಳೂರಿನಲ್ಲಿ ಒಂಟಿಯಾಗಿ ಜೀವಿಸುತ್ತಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಕೆ.ಎಸ್. ಪ್ರತಿಮಾ (37) ಹತ್ಯೆಯ ನಿಜವಾದ ಕಾರಣ ಬಹಿರಂಗಗೊಂಡಿದೆ. ಪ್ರಕರಣದ ಆರೋಪಿ ಕಿರಣ್, ಆರಂಭದಲ್ಲಿ ಹೇಳಿದ್ದು ಸುಳ್ಳಾಗಿದ್ದು, ಹಣಕ್ಕಾಗಿ ಉದ್ದೇಶಪೂರ್ವಕ ಸಂಚು ರೂಪಿಸಿ ಕೃತ್ಯ ಎಸಗಿರುವುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ಸೆರೆಯಾದ ಆರಂಭದಲ್ಲಿ ಕೆಲಸಕ್ಕೆ ಪುನಃ ನೇಮಿಸಿಕೊಳ್ಳಲು ಒಪ್ಪದಿದ್ದಾಗ ಕೋಪದಿಂದ ಕೃತ್ಯ ಎಸಗಿದ್ದೇನೆ ಎಂದು ಆರೋಪಿ ಕಿರಣ್ ಹೇಳಿದ್ದನು. ಆದರೆ ತನಿಖೆ ಮುಂದುವರೆದಂತೆ ಆ ಹೇಳಿಕೆ ಸುಳ್ಳು, ಹಣಕ್ಕಾಗಿ ಸಂಚು ರೂಪಿಸಿ ಹತ್ಯೆಗೈದು ಬಳಿಕ ಮನೆಯಲ್ಲಿದ್ದ 5 ಲಕ್ಷ ನಗದು, 4 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ್ದಾನೆ ಎಂಬುದು ತಿಳಿದು ಬಂದಿದೆ.

ಕೃತ್ಯದ ಬಳಿಕ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಆರೋಪಿ ಕಿರಣ್‌ನನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರ ವಿಶೇಷ ತಂಡ ಬಂಧಿಸಿತ್ತು. ವಿಚಾರಣೆ ವೇಳೆ ಆರೋಪಿಯು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಲು ಒಪ್ಪದೇ ಇದ್ದಾಗ ಹತ್ಯೆಗೈದಿದ್ದೆ. ನಂತರ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದೆ” ಎಂದಿದ್ದ.

ಹಣ ಹಾಗೂ ಚಿನ್ನಾಭರಣ ದೋಚುವ ಉದ್ದೇಶದಿಂದ ಪ್ರತಿಮಾರನ್ನು ಹತ್ಯೆಗೈಯ್ಯಲು ಸಂಚು ರೂಪಿಸಿದ್ದ ಕಿರಣ್, ಮೊದಲು‌ ಹತ್ಯೆಗೈದು ನಂತರ ಪ್ರತಿಮಾರ ಕೈಯಲ್ಲಿದ್ದ ಎರಡು ಚಿನ್ನದ ಬಳೆ ಒಂದು ಬ್ರೇಸ್ ಲೈಟ್ ಹಾಗೂ ಮನೆಯಲ್ಲಿದ್ದ ನಗದು ದೋಚಿದ್ದ. ಬಳಿಕ ಆ ಹಣ ಹಾಗೂ ಚಿನ್ನಾಭರಣವನ್ನು ಕೋಣನಕುಂಟೆಯ ನಿವಾಸಿಯಾಗಿದ್ದ ತನ್ನ ಗೆಳೆಯ ಶಿವು ಎಂಬಾತನಿಗೆ ನೀಡಿ, ತನಗೆ ಯಾರೋ ಕೊಡಬೇಕಿತ್ತು. ಸದ್ಯಕ್ಕೆ
ಇದು ನಿಮ್ಮ ಮನೆಯಲ್ಲಿ ಇರಲಿ. ನಾನು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ಬಂದ ಬಳಿಕ ವಾಪಸ್ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದಾನೆ. ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದ ತನಿಖೆಯಲ್ಲಿ ಕಿರಣ್ ಈ ವಿಚಾರವನ್ನ ಬಾಯ್ಬಿಟ್ಟಿದ್ದಾನೆ.

ಹಣ ಹಾಗೂ ಚಿನ್ನಾಭರಣವನ್ನು ಆರೋಪಿಯು ದೋಚಿದ್ದ ಎಂಬುದು ಬಯಲಾಗುತ್ತಿದ್ದಂತೆ, ಆರೋಪಿಯ ಸ್ನೇಹಿತ ಶಿವುನನ್ನ ವಶಕ್ಕೆ ಪಡೆಯಲಾಗಿದೆ. ಐದು ಲಕ್ಷ ನಗದು ಮತ್ತು ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

ದೊಡ್ಡಕಲ್ಲಸಂದ್ರದ ಗೋಕುಲ ಅಪಾರ್ಟ್ಮೆಂಟಿನಲ್ಲಿ ನ.4 ರ ರಾತ್ರಿ 8:30ರ ಸುಮಾರಿಗೆ ಮನೆಗೆ ನುಗ್ಗಿ ಚಾಕು ಇರಿದು ಹತ್ಯೆ ಮಾಡಿದ್ದ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತುಡ್ಕಿ ಮೂಲದ ಪ್ರತಿಮಾ ಅವರಿಗೆ ಭೂ ವಿಜ್ಞಾನ ಇಲಾಖೆಯಲ್ಲಿ ನೌಕರಿ ದೊರೆತಿದ್ದರಿಂದ ಬೆಂಗಳೂರಲ್ಲಿ ವಾಸಿಸುತ್ತಿದ್ದರು. ಗಂಡ ಮತ್ತು ಮಗ ತೀರ್ಥಹಳ್ಳಿಯಲ್ಲೇ ವಾಸವಿದ್ದರು.

Join Whatsapp
Exit mobile version