Home ಟಾಪ್ ಸುದ್ದಿಗಳು ದೆಹಲಿ,ಮುಸ್ಲಿಮರ ಮೇಲೆ ದಬ್ಬಾಳಿಕೆ: ಕೇಜ್ರಿವಾಲ್ ನೈತಿಕತೆಯನ್ನು ಪ್ರಶ್ನಿಸಿದ ಗೀತಾ ಪಾಂಡೆ

ದೆಹಲಿ,ಮುಸ್ಲಿಮರ ಮೇಲೆ ದಬ್ಬಾಳಿಕೆ: ಕೇಜ್ರಿವಾಲ್ ನೈತಿಕತೆಯನ್ನು ಪ್ರಶ್ನಿಸಿದ ಗೀತಾ ಪಾಂಡೆ

ನವದೆಹಲಿ: ಭಾರತದ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ಧಾರ್ಮಿಕ ಹಿಂಸಾಚಾರ ಮತ್ತು ಮುಸ್ಲಿಮರ ಮೇಲೆ ಪೊಲೀಸ್ ದಬ್ಬಾಳಿಕೆಯ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿಲುವು ರಾಜಕೀಯವಾಗಿ ಸೂಕ್ತವಾಗಿರಬಹುದು, ಆದರೆ ಇದು ಇದು ನೈತಿಕವೇ ಎಂದು ಬಿಬಿಸಿಯ ಗೀತಾ ಪಾಂಡೆ ಪ್ರಶ್ನಿಸಿದ್ದಾರೆ.

ದಶಕದ ಹಿಂದೆ ರಾಜಕೀಯ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಮತ್ತು ಅಭಿವೃದ್ಧಿಯತ್ತ ಗಮನ ಹರಿಸುವ ಭರವಸೆ ನೀಡಿ ರಾಜಕೀಯ ಪ್ರವೇಶಿಸಿದ ಕೇಜ್ರಿವಾಲ್ ಅವರು ಈಗ ಮೌನ ಯಾಕೆ ಎಂದು ಕಿಡಿಕಾರಿದ್ದಾರೆ. ತಮ್ಮ ಪಕ್ಷವು ಎಲ್ಲಾ ಧರ್ಮಗಳ ಸಮಾನತೆ ಮತ್ತು ಎಲ್ಲರಿಗೂ ನ್ಯಾಯವನ್ನು ನಂಬುತ್ತದೆ ಎಂದು ಶ್ರೀ ಕೇಜ್ರಿವಾಲ್ ಆಗಾಗ್ಗೆ ಹೇಳುತ್ತಿರುತ್ತಾರೆ. ರಾಜಕೀಯವು ಜಾತಿ ಮತ್ತು ಧಾರ್ಮಿಕ ವಿಭಜನೆಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ದೇಶದಲ್ಲಿ, “ವಿಭಜನಕಾರಿ ರಾಜಕೀಯ”ದಿಂದ ದೂರವಿರುವ ಎಎಪಿಯ ಭರವಸೆಯನ್ನು ಜನರು ನಂಬಿದ್ದರು ಆದರೆ ಈಗ ಆ ನೈತಿಕತೆ ಆಪ್ ಕಳೆದುಕೊಂಡಿದೆ ಎಂದಿದ್ದಾರೆ.

ಕಳೆದ ವಾರದಿಂದ, ದೆಹಲಿಯ ಜಹಾಂಗೀರ್ಪುರಿ ನೆರೆಹೊರೆಯು ಹಿಂದೂ-ಮುಸ್ಲಿಂ ಹಿಂಸಾಚಾರದಿಂದ ನಲುಗಿತ್ತು ಆದರೆ ಕೇಜ್ರಿವಾಲ್ ನಗರದ ಮುಸ್ಲಿಮರ ಪರವಾಗಿ ಏಕೆ ಮಾತನಾಡುತ್ತಿಲ್ಲ ಎಂದು ಕೇಳುತ್ತಿದ್ದಾರೆ. ನರೇಂದ್ರ ಮೋದಿ ಅವರ ಹಿಂದೂ ರಾಷ್ಟ್ರೀಯವಾದಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಸರ್ಕಾರವು ತನ್ನ ಪೊಲೀಸ್ ಪಡೆಗಳನ್ನು ಕಳುಹಿಸಿ ಹೆಚ್ಚಿನ ಮುಸ್ಲಿಂ ಪುರುಷರನ್ನು ಬಂಧಿಸುವಾಗಲೂ ಕೇಜ್ರಿವಾಲ್ ಮೌನ ಎಂದು ದೂಷಿಸಿದ್ದಾರೆ.

Join Whatsapp
Exit mobile version