ಗಾಝಾ: ಖಾನ್ಯೂನಿಸ್ ನಗರದ ಬಳಿಯಿಂದ ದಕ್ಷಿಣ ಗಾಝಾ ಪಟ್ಟಿಯನ್ನು ಪ್ರವೇಶಿಸಿದ ಇಸ್ರೇಲ್ ರಕ್ಷಣಾ ಪಡೆ ಗಾಝಾ ನಗರದಲ್ಲಿ `ಜಸ್ಟಿಸ್ ಪ್ಯಾಲೇಸ್’ ಎಂದು ಕರೆಯಲಾಗುವ ಕಚೇರಿಯನ್ನು ನೆಲಸಮಗೊಳಿಸಿದೆ. ಗಾಝಾ ನಗರದ ಮಧ್ಯಭಾಗದಲ್ಲಿರುವ ಜಸ್ಟಿಸ್ ಪ್ಯಾಲೇಸ್ ಹಮಾಸ್ನ ಪ್ರಧಾನ ನ್ಯಾಯಾಲಯವಾಗಿದೆ. ಗಾಝಾ ನೆಲಕ್ಕೆ ಶಸ್ತ್ರಸಜ್ಜಿತ ಸಿಬಂದಿ ವಾಹಕಗಳನ್ನು ಹಾಗೂ ಬುಲ್ಡೋಜರ್ಗಳನ್ನೂ ತರಲಾಗಿದೆ ಎಂದು ಐಡಿಎಫ್ ಘೋಷಿಸಿದೆ. ಗಾಝಾ ಪಟ್ಟಿಯ ಸಲಾಹ್ ಅಲದೀನ್ ರಸ್ತೆಯನ್ನು ಐಡಿಎಫ್ ಎರಡೂ ಕಡೆಯಿಂದ ಬ್ಲಾಕ್ ಮಾಡಿದ್ದು ಕೇಂದ್ರ ಗಾಝಾದ ದೆಯರ್ ಅಲ್ಬಲಾಹ್ ಮತ್ತು ಖಾನ್ ಯೂನಿಸ್ ಪ್ರದೇಶದ ನಡುವಿನ ಸಂಪರ್ಕ ಕಡಿತಗೊಳಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ತಾನು ಯಾವುದೇ ವ್ಯಕ್ತಿಯನ್ನು ಶಾಶ್ವತವಾಗಿ ಸ್ಥಳಾಂತರಗೊಳಿಸಲು ಇಚ್ಛಿಸಿಲ್ಲ. ಯುದ್ಧಕ್ಷೇತ್ರವನ್ನು ತೊರೆಯುವಂತೆ ನಾಗರಿಕರಿಗೆ ಮನವಿ ಮಾಡಿದ್ದೇವೆ. ಗಾಝಾ ಪಟ್ಟಿಯೊಳಗೆ ಸುರಕ್ಷಿತ ಮಾನವೀಯ ವಲಯವನ್ನು ವ್ಯವಸ್ಥೆ ಮಾಡಲಿದ್ದೇವೆ’ ಎಂದು ಇಸ್ರೇಲ್ ಸೇನೆಯ ವಕ್ತಾರ ಜೊನಾಥನ್ ಕಾನ್ರಿಕಸ್ ಹೇಳಿದ್ದಾರೆ.