Home ಟಾಪ್ ಸುದ್ದಿಗಳು ಗಾಝಾ: ಆಹಾರ ಮಾರಾಟ ಮಾಡದಂತೆ ವಿಧಿಸಿದ್ದ ನಿಷೇಧ ತೆರವುಗೊಳಿಸಿದ ಇಸ್ರೇಲ್

ಗಾಝಾ: ಆಹಾರ ಮಾರಾಟ ಮಾಡದಂತೆ ವಿಧಿಸಿದ್ದ ನಿಷೇಧ ತೆರವುಗೊಳಿಸಿದ ಇಸ್ರೇಲ್

ಗಾಝಾ: ಇಲ್ಲಿ ಹಾಗೂ ಆಕ್ರಮಿತ ಪಶ್ಚಿಮದಂಡೆ ಪ್ರದೇಶದಿಂದ ಆಹಾರ ಮಾರಾಟ ಮಾಡದಂತೆ ವಿಧಿಸಿದ್ದ ನಿಷೇಧವನ್ನು ಇಸ್ರೇಲ್ ತೆರವುಗೊಳಿಸಿದೆ.

ತಾಜಾ ಹಣ್ಣು, ತರಕಾರಿ ಮತ್ತು ಡೈರಿ ಉತ್ಪನ್ನಗಳನ್ನು ಇಸ್ರೇಲಿ ಮತ್ತು ಪ್ಯಾಲೆಸ್ತೀನ್ ಪೂರೈಕೆದಾರರಿಂದ ಖರೀದಿ ಮಾಡಲು ಗಾಝಾ ವ್ಯಾಪಾರಿಗಳಿಗೆ ಇಸ್ರೇಲ್ ಸೇನೆ ಅನುಮತಿ ನೀಡಿದೆ. ಗಾಝಾದ ರಫಾ ಪಟ್ಟಣದ ಮೇಲೆ ಭೀಕರ ದಾಳಿ ನಡೆಸಿದ ಕೆಲ ದಿನಗಳ ಬಳಿಕ ಇಸ್ರೇಲ್ ಈ ಅನುಮತಿ ನೀಡಿದೆ. ರಫಾ ಪಟ್ಟಣದ ಮೇಲಿನ ದಾಳಿಯಿಂದಾಗಿ ಅಂತಾರಾಷ್ಟ್ರೀಯ ನೆರವಿಗೆ ತಡೆಯಾಗಿದೆ. ಹಿನ್ನೆಲೆಯಲ್ಲಿ ಈ ಕ್ರಮ ಆರಂಭಿಸಿದೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.

ರಫಾ ಪಟ್ಟಣದ ಮೇಲೆ ಇಸ್ರೇಲ್ ಭೀಕರ ಆಕ್ರಮಣದಿಂದಾಗಿ ಗಾಝಾ ಪ್ರದೇಶಕ್ಕೆ ಈಜಿಪ್ಟ್‌ನಿಂ ಬರುವ ದಾರಿ ಮುಚ್ಚಿದ್ದು ಸಂತ್ರಸ್ತರಿಗೆ ವಿಶ್ವಸಂಸ್ಥೆಯ ನೆರವಿಗೆ ತಡೆಯಾಗಿ ಪರಿಣಮಿಸಿದೆ. ದೇಶದಲ್ಲಿ ಕ್ಷಾಮ ಪರಿಸ್ಥಿತಿ ಎದುರಾಗುವ ಬಗ್ಗೆ ಮಾನವೀಯ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಸಂಘರ್ಷವನ್ನು ಸ್ಥಗಿತಗೊಳಿಸುವಂತೆ ಇಸ್ರೇಲ್ ಮೇಲೆ ಜಾಗತಿಕ ಒತ್ತಡ ಹೆಚ್ಚುತ್ತಿದೆ.

Join Whatsapp
Exit mobile version