ಲಕ್ನೋ: ಇನ್ನು ಮುಂದೆ ಉತ್ತರ ಪ್ರದೇಶದ ಎಲ್ಲ ಜೈಲುಗಳಲ್ಲಿ ಗಾಯತ್ರಿ ಮಂತ್ರ ಮತ್ತು ಮಹಾ ಮೃತ್ಯುಂಜಯ ಮಂತ್ರಗಳು ಮೊಳಗಲಿವೆ ಎಂದು ಆದಿತ್ಯನಾಥ್ ಸರಕಾರ ಆದೇಶ ಹೊರಡಿಸಿದೆ.
ಜೈಲಿನಲ್ಲಿರುವ ಖೈದಿಗಳ ಮಾನಸಿಕ ಶಾಂತಿಗಾಗಿ ಈ ಮಂತ್ರಗಳನ್ನು ಮೊಳಗಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಈಗಾಗಲೇ ರಾಜ್ಯ ಕಾರಾಗೃಹ ಸಚಿವ ಧರಂವೀರ್ ಪ್ರಜಾಪತಿ ಅವರು ಕಾರಾಗೃಹ ಆಡಳಿತ ಮಂಡಳಿಗೆ ಈ ಮಂತ್ರಗಳನ್ನು ಮೊಳಗಿಸುವಂತೆ ಆದೇಶಿಸಿದ್ದಾರೆ.
ಈ ಮಂತ್ರಗಳ ಪಠಣ ಮಾಡುವುದರಿಂದ ಖೈದಿಗಳಿಗೆ ನೆಮ್ಮದಿ ಸಿಗುತ್ತದೆ. ಜೈಲಿನಿಂದ ಹೊರಬಂದು ಉತ್ತಮ ನಾಗರಿಕರಾಗುತ್ತಾರೆ. ಜೊತೆಗೆ ಅವರು ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕ ಹೊಂದಿರುತ್ತಾರೆ ಎಂಬುದು ಸರ್ಕಾರದ ಹೇಳಿದೆ. ಆದ್ದರಿಂದ ಕಾರಾಗೃಹಗಳಲ್ಲಿ ಈ ಮಂತ್ರಗಳ ರಾಗಗಳನ್ನು ನುಡಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.