ಕೋವಿಡ್‌ ಔಷಧಿಗಳ ಅಕ್ರಮ ದಾಸ್ತಾನು | ಗೌತಮ್‌ ಗಂಭೀರ್‌ ಫೌಂಡೇಶನ್‌ ತಪ್ಪಿತಸ್ಥ : ವರದಿ

Prasthutha|

ನವದೆಹಲಿ : ಕೋವಿಡ್‌ ರೋಗಿಗಳಿಗೆ ಬೇಕಾದ ಅತ್ಯಾವಶ್ಯಕ ಔಷಧಿಗಳ ಅನಧಿಕೃತ ದಾಸ್ತಾನು, ವಿತರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌತಮ್‌ ಗಂಭೀರ್‌ ಫೌಂಡೇಶನ್‌ ನ ಅಪರಾಧ ಸಾಬೀತಾಗಿದೆ ಎಂದು ಭಾರತೀಯ ಪ್ರಧಾನ ಔಷಧ ನಿಯಂತ್ರಕರ ಕಚೇರಿ ಹೈಕೋರ್ಟ್‌ ಗೆ ತಿಳಿಸಿದೆ.

- Advertisement -

ದೆಹಲಿ ಹೈಕೋರ್ಟ್‌ ದೇಶಾದ್ಯಂತ ವ್ಯಾಪಕ ಕೊರತೆ ಇರುವ ಪರಿಸ್ಥಿತಿಯಲ್ಲಿ ಯಥೇಚ್ಛವಾಗಿ ಈ ಔಷಧಿಗಳನ್ನು ಗೌತಮ್‌ ಗಂಭೀರ್‌ ಫೌಂಡೇಶನ್‌ ಸಂಸ್ಥೆ ಹೇಗೆ ಸಂಗ್ರಹಿಸಿತ್ತು? ಇದಕ್ಕೆ ಸಹಕರಿಸಿದ ಅಧಿಕಾರಿಗಳು ಯಾರು? ಎಂದು ದೆಹಲಿ ಹೈಕೋರ್ಟ್‌ ಅಲ್ಲಿನ ಔಷಧ ನಿಯಂತ್ರಕರನ್ನು ಪ್ರಶ್ನಿಸಿತ್ತು.

ಈ ಬಗ್ಗೆ ವರದಿ ನೀಡಿದ್ದ ದೆಹಲಿ ಔಷಧ ನಿಯಂತ್ರಕ ಇಲಾಖೆ, ವಿಷಯಕ್ಕೆ ಸಂಬಂಧಿಸಿ ಗೌತಮ್‌ ಗಂಭೀರ್‌ ಫೌಂಡೇಶನ್‌ ತಪ್ಪಿತಸ್ಥ ಎಂದಿದೆ. ಅಲ್ಲದೆ, ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಕೂಡ ಮಾಡಿದೆ.

- Advertisement -

ಕೋವಿಡ್‌ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದ್ದ ಅತ್ಯಾವಶ್ಯಕ ಫ್ಯಾಬಿ ಫ್ಲೂ ಮಾತ್ರೆಗಳನ್ನು ಗೌತಮ್‌ ಗಂಭೀರ್‌ ಫೌಂಡೇಶನ್‌ ಸಂಸ್ಥೆ ಸಂಗ್ರಹಿಸಿಟ್ಟಿತ್ತು ಎಂಬ ಆರೋಪ ಕೇಳಿಬಂದಿತ್ತು.

Join Whatsapp