ಮಹಾರಾಷ್ಟ್ರ | ರಾಸಾಯನಿಕ ಕಾರ್ಖಾನೆಯಲ್ಲಿ ಅನಿಲ ಸೋರಿಕೆ; ಆತಂಕಗೊಂಡ ಜನ

Prasthutha|

ಮುಂಬೈ : ಮಹಾರಾಷ್ಟ್ರದ ಬದ್ಲಾಪುರದ ರಾಸಾಯನಿಕ ಕಾರ್ಖಾನೆಯಲ್ಲಿ ಅನಿಲ ಸೋರಿಕೆ ಸಂಭವಿಸಿದ ಬಗ್ಗೆ ವರದಿಯಾಗಿದ್ದು, ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಕಳೆದ ತಡರಾತ್ರಿ ಘಟನೆ ನಡೆದಿದ್ದು, ಅನಿಲ ಸೋರಿಕೆಯಾದ ನಂತರ ಮೂರು ಕಿ.ಮೀ. ಪ್ರದೇಶದಲ್ಲಿ ಹಲವಾರು ಮಂದಿ ಉಸಿರಾಟ ಹಾಗೂ ಕಣ್ಣುಗಳಲ್ಲಿ ಉರಿ ಕಾಣಿಸುವ ಬಗ್ಗೆ ದೂರಿದ್ದಾರೆ.

- Advertisement -

ಶಿರ್ಗಾಂವ್‌ ಎಂಐಡಿಸಿಯ ನೊಬೆಲ್‌ ಇಂಟರ್ಮಿಡಿಯೇಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯಲ್ಲಿ ಅನಿಲ ಸೋರಿಕೆಯಾಗಿದೆ. ಗುರುವಾರ ರಾತ್ರಿ ಹತ್ತೂವರೆ ಗಂಟೆಗೆ ಘಟನೆ  ಸಂಭವಿಸಿದ್ದು, ಒಂದು ಗಂಟೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ ಎಂದು ಥಾಣೆ ಮಹಾನಗರ ಪಾಲಿಕೆ ತಿಳಿಸಿದೆ.

ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾರೂ ಗಾಯಗೊಂಡಿಲ್ಲ ಎಂದು ಥಾಣೆ ಮುನ್ಸಿಪಲ್‌ ಕಾರ್ಪೊರೇಶನ್‌ ತಿಳಿಸಿದೆ.  

Join Whatsapp
Exit mobile version