Home ಟಾಪ್ ಸುದ್ದಿಗಳು ರಸಗೊಬ್ಬರ ಕಾರ್ಖಾನೆ ಘಟಕದಲ್ಲಿ ಅನಿಲ ಸೋರಿಕೆ : ಇಬ್ಬರು ಸಾವು, 15 ಮಂದಿ ಅಸ್ವಸ್ಥ

ರಸಗೊಬ್ಬರ ಕಾರ್ಖಾನೆ ಘಟಕದಲ್ಲಿ ಅನಿಲ ಸೋರಿಕೆ : ಇಬ್ಬರು ಸಾವು, 15 ಮಂದಿ ಅಸ್ವಸ್ಥ

ಫೂಲ್ಪುರ್ : ಇಲ್ಲಿನ ರಸಗೊಬ್ಬರ ಕಾರ್ಖಾನೆ ಘಟಕದಲ್ಲಿ ಅನಿಲ ಸೋರಿಕೆಯುಂಟಾಗಿ ಉಸಿರುಗಟ್ಟಿ ಇಬ್ಬರು ಮೃತಪಟ್ಟು, ಸುಮಾರು 15ಕ್ಕೂ ಹೆಚ್ಚು ಮಂದಿ ಅಸ್ವಸ್ಥಕ್ಕೀಡಾಗಿರುವ ಘಟನೆ ಬುಧವಾರ ನಸುಕಿನ ಜಾವ ಸಂಭವಿಸಿದೆ.

ಫೂಲ್ ಪುರ್ ನ ಭಾರತೀಯ ರೈತ ರಸಗೊಬ್ಬರ ಸಹಕಾರಿ ಲಿಮಿಟೆಡ್(ಐಎಫ್‌ಎಫ್ ಸಿಒ)ದಲ್ಲಿ ಅನಿಲ ಸೋರಿಕೆಯಾಗಿ ಈ ದುರ್ಘಟನೆ ನಡೆದಿದ್ದು ಒಂದು ಘಟಕದ ಕಾರ್ಯಾಚರಣೆಯನ್ನು ಸದ್ಯ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಸದ್ಯ ಅನಿಲ ಸೋರಿಕೆ ನಿಂತಿದೆ ಎಂದು ಪ್ರಯಾಗ್ ರಾಜ್ ಜಿಲ್ಲಾಧಿಕಾರಿ ಭಾನು ಚಂದ್ರ ಗೋಸ್ವಾಮಿ ತಿಳಿಸಿದ್ದಾರೆ.

ಅನಿಲ ಸೋರಿಕೆಯಿಂದಾಗಿ ಐಎಫ್‌ಎಫ್ ಸಿಒದ 15 ಮಂದಿ ನೌಕರರು ಅಸ್ವಸ್ಥಕ್ಕೀಡಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version