ಸಂಪಾಜೆ: ಭೀಕರ ಮಳೆಯಿಂದ ಜಲ ಪ್ರಳಯ ಉಂಟಾಗಿ ಕಲ್ಲುಗುಂಡಿ ಹೊಳೆಯ ಸಮೀಪ ಸಂಗಂ ಕಟ್ಟಡದಲ್ಲಿ ವಾಸಿಸುವ ದೈನಾಬಿ ಯವರ ಮನೆಸಾಮಗ್ರಿಗಳು ನೀರಿನಲ್ಲಿ ತೇಲಿಹೋಗಿದ್ದು, ಹೊಳೆಯಲ್ಲಿ ಸಿಕ್ಕ ಗ್ಯಾಸ್ ಸಿಲಿಂಡರನ್ನು ಅವರಿಗೆ ಹಿಂದಿರುಗಿಸುವ ಮೂಲಕ ಯುವಕರ ತಂಡವೊಂದು ಮಾನವೀಯತೆ ಮೆರೆದಿದೆ
ಪೇರಡ್ಕ ಪಯಸ್ವಿನಿ ಹೊಳೆಯಲ್ಲಿ ಗ್ಯಾಸ್ ಸಿಲಿಂಡರ್ ಹರಿದು ಬರುವುದನ್ನು ಕಂಡ ಜನತಾದಳ ಮುಖಂಡ ಹನೀಫ್ ಮೊಟ್ಟೆಂಗರ್, ಅಬ್ದುಲ್ ಖಾದರ್ ಮೋಟ್ಟೆಂಗಾರ್ ಹಾಗೂ ಪೇರಡ್ಕ ನಿವಾಸಿಗಳಾದ ಜುರೈದ್, ಸಾದುಮನ್ , ಸುಹೈಲ್ ,ಸುನಿಲ್ ಮೊದಲಾದವರು ಮನೆ ಸಾಮಗ್ರಿಗಳನ್ನು ಹಿಡಿದುಕೊಂಡು ಸಂಗ್ರಹಿಸಿದ್ದರು.
ಮರುದಿನ ವಾಟ್ಸಾಪ್ ಮುಖಾಂತರ ಸಾಮಾಗ್ರಿಗಳ ವಾರಿಸುದಾರರ ಜಾಡು ಹಿಡಿಯಲು ಶುರುಮಾಡಿದ ಯುವಕರು ಕಲ್ಲುಗುಂಡಿ ಭಾಗದ ಮನೆಯವರ ಗ್ಯಾಸ್ ಸಿಲಿಂಡರ್ ನೀರಲ್ಲಿ ಕೊಚ್ಚಿ ಹೋಗಿದೆ ಎಂದು ತಿಳಿದು, ವಾರಿಸುದಾರರಾದ ಧೈನಾಬಿ ಅವರಿಗೆ ಅದನ್ನು ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ನೀರಲ್ಲಿ ಕೊಚ್ಚಿ ಹೋಗುವ ಹಲವಾರು ಸಾಮಾಗ್ರಿಗಳನ್ನು ಸಂಗ್ರಹಿಸಿ ಮರಳಿ ವಾರಿಸುದಾರರಿಗೆ ಹಿಂದಿರುಗಿಸುವ ಇವರ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗುತ್ತಿದೆ.