Home ಟಾಪ್ ಸುದ್ದಿಗಳು ಗುಜರಿ ವಸ್ತುಗಳಿಗೆ ಬೆಂಕಿ: ವ್ಯಕ್ತಿ ಸಜೀವ ದಹನ

ಗುಜರಿ ವಸ್ತುಗಳಿಗೆ ಬೆಂಕಿ: ವ್ಯಕ್ತಿ ಸಜೀವ ದಹನ

ತುಮಕೂರು: ನಗರದ ಕ್ಯಾತ್ಸಂದ್ರದ ಬಳಿ ಗುಜರಿ ವಸ್ತುಗಳನ್ನು ತುಂಬಿದ್ದ ಕಟ್ಟಡದಲ್ಲಿ ಬೆಂಕಿ ಅಪಘಾತವಾಗಿದ್ದು, ವ್ಯಕ್ತಿಯೊಬ್ಬರು ಜೀವಂತವಾಗಿ ಸುಟ್ಟುಹೋಗಿ ಮೃತರಾಗಿದ್ದಾರೆ.

ಬಡ್ಡಿಹಳ್ಳಿ ನಿವಾಸಿ ಶಿವಕುಮಾರ್ ಎಂಬವರಿಗೆ ಸೇರಿದ ಕಟ್ಟಡದ ಮೊದಲ ಮಹಡಿ ಮಹಡಿ ಖಾಲಿ ಇದ್ದು, ಗುಜರಿ ವಸ್ತುಗಳನ್ನು ತುಂಬಿಸಲಾಗಿತ್ತು. ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ವ್ಯಕ್ತಿಯ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಗುರುತು ಪತ್ತೆಯಾಗಿಲ್ಲ. ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version