Home ಟಾಪ್ ಸುದ್ದಿಗಳು ಸೌರವ್ ಗಂಗೂಲಿಗೆ ಮತ್ತೆ ಎದೆನೋವು | ಆಸ್ಪತ್ರೆಗೆ ದಾಖಲು

ಸೌರವ್ ಗಂಗೂಲಿಗೆ ಮತ್ತೆ ಎದೆನೋವು | ಆಸ್ಪತ್ರೆಗೆ ದಾಖಲು

ಕೊಲ್ಕತಾ : ಮಾಜಿ ಕ್ರಿಕೆಟಿಗ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತೆ ಕೊಲ್ಕತಾದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಿದುದರಿಂದ ಅವರು ಆಸ್ಪತ್ರೆಗೆ ದಾಖಲಾದರು ಎಂದು ವರದಿಗಳು ತಿಳಿಸಿವೆ.

ಇತ್ತೀಚೆಗೆ ಲಘು ಹೃದಯಾಘಾತಕ್ಕೆ ಗುರಿಯಾಗಿದ್ದ ಗಂಗೂಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಗಂಗೂಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದುದರಿಂದ ಅವರನ್ನು ಕೊಲ್ಕತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿರುವುದಾಗಿ ವರದಿಗಳು ತಿಳಿಸಿವೆ.  

Join Whatsapp
Exit mobile version