ಗಂಗೊಳ್ಳಿಯಲ್ಲಿ ಗೋಹತ್ಯೆ ವಿಚಾರದಲ್ಲಿ ಕೆಲವು ದಿನಗಳ ಹಿಂದೆ ಸಂಘಪರಿವಾರ ಆಯೋಜಿಸಿದ ಪ್ರತಿಭಟನೆಯಲ್ಲಿ ಪ್ರವಾದಿ(ಸ.ಅ) ಮತ್ತು ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಿ ಘೋಷಣೆಗಳನ್ನು ಕೂಗಿರುತ್ತಾರೆ. ಪ್ರಸ್ತುತ ಗಂಗೊಳ್ಳಿ ಬೂದಿ ಮುಚ್ಚಿದ ಕೆಂಡದಂತಿದ್ದು, ಈಗ ಘಟನೆ ನಡೆದ ಸ್ಥಳಕ್ಕೆ ಅತುಲ್ ಕುಮಾರ್ ಸಬರಲಾಲ್ ಅಲಿಯಾಸ್ ಮಧುಗಿರಿ ಮೋದಿ ಭೇಟಿ ನೀಡಿ ಅಲ್ಲಿನ ಹಿಂದು ಸಮುದಾಯವನ್ನು ಮುಸ್ಲಿಂ ಸಮುದಾಯದ ವಿರುದ್ಧ ಎತ್ತಿಕಟ್ಟುವ ಈತನ ವಿರುದ್ಧ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಾಗಿದ್ದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕುಂದಾಪುರ ತಾಲೂಕು ಪ್ರವೇಶವನ್ನು ನಿಷೇಧಿಸುಬೇಕು.
ಈತ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ ಹಿನ್ನಲೆಯಲ್ಲಿ ಸ್ವತ: ತಹಶೀಲ್ದಾರರೇ ಈತನ ವಿರುದ್ದ53 (A), 505(2), 506 ಅಡಿ ಪ್ರಕರಣ ದಾಖಲಿಸಿದ್ದಾರೆ. ಕೋಮುಭಾವನೆಯನ್ನು ಕೆರಳಿಸಿ ಜಿಲ್ಲೆಯ ಶಾಂತಿ ಸುವ್ಯಸ್ಥೆಯನ್ನು ಕದಡುವ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ಕುಂದಾಪುರ ತಾಲೂಕು ಪ್ರವೇಶಕ್ಕೆ ಅವಕಾಶ ನೀಡಬಾರದು ಮತ್ತು ಜಿಲ್ಲೆಯ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಆಸೀಫ್ ಕೋಟೆಶ್ವರ ಆಗ್ರಹಿಸಿದ್ದಾರೆ.