Home ಟಾಪ್ ಸುದ್ದಿಗಳು ಕಾರಿನ ಗಾಜನ್ನು ಒರೆಸುವ ನೆಪಲ್ಲಿ ಫಾಸ್ಟ್ಯಾಗ್ ಹಣ ಕಬಳಿಸುವ ಗ್ಯಾಂಗ್ !

ಕಾರಿನ ಗಾಜನ್ನು ಒರೆಸುವ ನೆಪಲ್ಲಿ ಫಾಸ್ಟ್ಯಾಗ್ ಹಣ ಕಬಳಿಸುವ ಗ್ಯಾಂಗ್ !

ಅಸಲಿಯತ್ತು ಬಯಲು

ನವದೆಹಲಿ: ಕಾರನ್ನು ಒರೆಸುವ ನೆಪದಲ್ಲಿ ಬರುವ ಬಾಲಕರು ಕಾರಿನ ಗಾಜಿನ ಮೇಲಿರುವ ಫಾಸ್ಟ್ಯಾಗ್ ಸ್ಟಿಕ್ಕರ್ ಮೇಲೆ ಕೈಯಾಡಿಸುತ್ತ ಅದರಲ್ಲಿನ ಹಣವನ್ನು ಕಬಳಿಸುತ್ತಿದ್ದಾರೆ ಎಂದು ಹೇಳಲಾದ ವೀಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಆದರೆ ಇದರ ಕುರಿತಂತೆ ಅಸಲಿಯತ್ತು ಇದೀಗ ಬಯಲಾಗಿದೆ.


ಬಾಲಕನೊಬ್ಬ ಕಾರಿನ ಗಾಜನ್ನು ಒರೆಸುತ್ತ ಅದರ ಮೇಲಿನ ಫಾಸ್ಟ್ಯಾಗ್ ಸ್ಟಿಕ್ಕರ್ ಮೇಲೆ ಕೈಯಾಡಿಸಿದ್ದನ್ನು ನೋಡಿ ಅನುಮಾನಗೊಂಡ ಕಾರುಸವಾರನೊಬ್ಬ ಆತನನ್ನು ಪ್ರಶ್ನಿಸುತ್ತಾನೆ. ಆಗ ಬಾಲಕ ಓಡಿಹೋಗುತ್ತಾನೆ. ಆ ಬಾಲಕ ಫಾಸ್ಟ್ಯಾಗ್ ಹಣ ಕಬಳಿಸಲು ಮುಂದಾಗಿದ್ದ ಎಂದೂ, ದೊಡ್ಡ ವಂಚನಾ ಜಾಲವೇ ಇದೆ ಎಂದೂ ಹೇಳುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.


ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಪಿಐಬಿ ಅದು ಫೇಕ್ ವೀಡಿಯೋ. ಇಂತಹ ಟ್ರಾನ್ ಸ್ಯಾಕ್ಷನ್ ಸಾಧ್ಯವಿಲ್ಲ. ಅದು ಓಪನ್ ಇಂಟರ್ನೆಟ್ ನಲ್ಲಂತೂ ಅಸಾಧ್ಯ. ಪ್ರತಿ ಟೋಲ್ ಪ್ಲಾಜಾ ಕೂಡ ನಿಗದಿತ ಬ್ಯಾಂಕ್ ಮತ್ತು ಜಿಯೋ ಕೋಡ್ ಹೊಂದಿರುವ ಯುನಿಕ್ ಕೋಡ್ ಒಳಗೊಂಡಿರುತ್ತದೆ. ಇದು ನ್ಯಾಷನಲ್ ಇಲೆಕ್ಟ್ರಿಕ್ ಟೋಲ್ ಕಲೆಕ್ಷನ್ ಸಿಸ್ಟಮ್ ಮೂಲಕ ಮ್ಯಾಪಿಂಗ್ ಆಗುತ್ತಿರುತ್ತದೆ. ಟೋಲ್ ಫಾಸ್ಟ್ಯಾಗ್ ಪ್ರಿಪೇಯ್ಡ್ ವ್ಯಾಲೆಟ್ ಪಾವತಿ ಸುರಕ್ಷಿತ. ಈಗ ಹರಿದಾಡುತ್ತಿರುವ ವೀಡಿಯೋ ಫೇಕ್ ಎಂದು ಹೇಳಿದೆ.

Join Whatsapp
Exit mobile version