ಮುಸ್ಲಿಮರ ಮನೆಗಳ ಮೇಲೆ ಸಂಘಪರಿವಾರ ದಾಳಿ: ಮಾರಕಾಯುಧದೊಂದಿಗೆ ಅಮಾನುಷವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳ ತಂಡ

Prasthutha|

ಹರಿದ್ವಾರ: ಮುಸ್ಲಿಮರ ಮನೆಗಳು ಮತ್ತು ಮಳಿಗೆಗಳ ಮೇಲೆ ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಉತ್ತರಾಖಂಡದ ಹರಿದ್ವಾರ ಸಮೀಪದ ಇಕ್ಬಾಲ್ ಪುರದಲ್ಲಿ ನಡೆದಿದೆ.

- Advertisement -

ಮಾರಕಾಯುಧಗಳೊಂದಿಗೆ ಬಂದ 100 ಕ್ಕೂ ಮಿಕ್ಕಿದ ದುಷ್ಕರ್ಮಿಗಳ ತಂಡ, ಮಹಿಳೆಯರೂ ಸೇರಿದಂತೆ ಹಲವರಿಗೆ ಅಮಾನುಷವಾಗಿ ಹಲ್ಲೆ ನಡೆಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಹಿಂದೆ ಸಂಘಪರಿವಾರ ಪ್ರೇರಿತ ಶಕ್ತಿಗಳು ಹರಿದ್ವಾರದಲ್ಲಿ ಆಯೋಜಿಸಿದ್ದ ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ್ದು, ಈ ಘಟನೆ ಅದರ ಮುಂದುವರಿದ ಭಾಗವೆಂದು ಸಾರ್ವಜನಿಕರು ದೂರಿದ್ದಾರೆ.

- Advertisement -

ಕೇಸರಿ ಬಟ್ಟೆಯಲ್ಲಿ ಮುಖ ಮುಚ್ಚಿದ ಸಂಘಪರಿವಾರ ಕಾರ್ಯಕರ್ತರು ಮರದ ದೊಣ್ಣೆ ಸಹಿತ ಮಾರಕಾಯುಧಗಳೊಂದಿಗೆ ಈ ಪ್ರದೇಶದಲ್ಲಿ ಶುಕ್ರವಾರ ಜಾಥಾವನ್ನು ಆಯೋಜಿಸಿತ್ತು. ಅಲ್ಲದೆ ಪ್ರಚೋದನಕಾರಿ ಘೋಷಣೆ ಕೂಗಿದ ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮರ ಮೇಲೆ ದಾಳಿ ನಡೆಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಮಧ್ಯೆ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಹರಿದ್ವಾರ ಪೊಲೀಸರು ನಿರಾಕರಿಸಿದ್ದು, ದಾಳಿಯ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವೃದ್ಧರೊಬ್ಬರ ದೇಹದಿಂದ ರಕ್ತ ಸುರಿಯುತ್ತಿರುವ ದೃಶ್ಯಾವಳಿ ವೀಡಿಯೋದಲ್ಲಿ ಸೆರೆಯಾಗಿದೆ.

Join Whatsapp
Exit mobile version