ನೆಲ್ಯಾಡಿ ಉದನೆ ಗಣಪತಿ ಕಟ್ಟೆ ಧ್ವಂಸ ಪ್ರಕರಣ : ಕಿಡಿಗೇಡಿ ರವೀಂದ್ರ ಕುಮಾರ್ ಬಂಧನ

Prasthutha|

ಉಪ್ಪಿನಂಗಡಿ: ನೆಲ್ಯಾಡಿ ಸಮೀಪದ ಉದನೆ ಎಂಬಲ್ಲಿ ಗಣಪತಿ ಕಟ್ಟೆಯ ಮೇಲೆ ಕಲ್ಲು ಎತ್ತಿ ಹಾಕಿ ಧ್ವಂಸಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರ ಮೂಲದ ರವೀಂದ್ರ ಕುಮಾರ್ (25) ಎಂದು ತಿಳಿದು ಬಂದಿದೆ.

- Advertisement -

ಉದನೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಶುಕ್ರವಾರ ಉದನೆ ಗಣಪತಿ ಕಟ್ಟೆಯಲ್ಲಿ ಸರಳವಾಗಿ ಗಣೇಶೋತ್ಸವ ಆಚರಿಸಿತ್ತು. ಈ ಹಿನ್ನೆಲೆಯಲ್ಲಿ ಗಣಪತಿ ಕಟ್ಟೆಯ ಮೆಟ್ಟಿಲನ್ನು ಬಾಳೆಗಿಡಗಳಿಂದ ಶೃಂಗರಿಸಲಾಗಿತ್ತು. ಆದರೆ ರಾತ್ರಿ ವೇಳೆ ಬಾಳೆಗಿಡಗಳನ್ನು ಕಿತ್ತೆಸೆದು ಕಲ್ಲುಗಳನ್ನು ಎತ್ತಿಹಾಕಿ ಕಟ್ಟೆಯ ಮೆಟ್ಟಿಲುಗಳನ್ನು ಧ್ವಂಸ ಮಾಡಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲಿ ಕೆಲಕಾಲ ಉದಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯ ನಿವಾಸಿಗಳನ್ನು ಧೃತಿಗೆಡಿಸಿತ್ತು. ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಉಪ್ಪಿನಂಗಡಿ ಪೊಲೀಸರು, ಘಟನೆ 24 ಗಂಟೆಯೊಳಗೆ ನೈಜ್ಯ ಆರೋಪಿಯನ್ನು ಬಂಧಿಸುವ ಮೂಲಕ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ.



Join Whatsapp