ಬೆಂಗಳೂರು: ಗಾಂಧಿವಾದನ್ನು ಕಿತ್ತೊಗೆಯಬೇಕು ಎಂದು ಹೇಳಿಕೆ ನೀಡುವ ಮೂಲಕ ಚೇತನ್ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಈ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಗಾಂಧಿಯವರ ‘ಧಾರ್ಮಿಕ ಸಾಮರಸ್ಯ’ ಇಂದಿನ ಅಗತ್ಯ ಎಂದು ಪ್ರತಿಪಾದಿಸುವ ಉದಾರವಾದಿಗಳಿಗೆ ನಮ್ಮ ಸಾಂವಿಧಾನಿಕ ತತ್ವಗಳು ಅರ್ಥವಾಗುತ್ತಿಲ್ಲ. ‘ಖಾಸಗಿಯಾಗಿ, ನಾವೆಲ್ಲರೂ ಧರ್ಮದ ಹಕ್ಕನ್ನು ಹೊಂದಿದ್ದೇವೆ. ಸಾರ್ವಜನಿಕವಾಗಿ, ನಾವು ಜಾತ್ಯತೀತ ರಾಷ್ಟ್ರ –ಅಂದರೆ ಧರ್ಮದಿಂದ ದೂರ ಉಳಿಯುವುದಾಗಿದೆ. ‘ಧಾರ್ಮಿಕ ಸಾಮರಸ್ಯ’ ಎಂದರೆ ಅಸಮಾನತೆಯ ಸಂರಕ್ಷಣೆ. ಇದರಿಂದಾಗಿ ಗಾಂಧಿವಾದನ್ನು ಕಿತ್ತೊಗೆಯಬೇಕು’ ಎಂದು ಚೇತನ್ ಬರದುಕೊಂಡಿದ್ದಾರೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) December 11, 2023