Home ಟಾಪ್ ಸುದ್ದಿಗಳು ವಂಚನೆ ಪ್ರಕರಣ : ಮಹಾತ್ಮ ಗಾಂಧೀಜಿ ಮರಿಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದಲ್ಲಿ ಏಳು ವರ್ಷ ಜೈಲು ಶಿಕ್ಷೆ

ವಂಚನೆ ಪ್ರಕರಣ : ಮಹಾತ್ಮ ಗಾಂಧೀಜಿ ಮರಿಮೊಮ್ಮಗಳಿಗೆ ದಕ್ಷಿಣ ಆಫ್ರಿಕಾದಲ್ಲಿ ಏಳು ವರ್ಷ ಜೈಲು ಶಿಕ್ಷೆ

ಜೊಹಾನ್ಸ್‌ ಬರ್ಗ್‌ : ನಕಲಿ ದಾಖಲೆಗಳ ಮೂಲಕ ಕೋಟ್ಯಂತರ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾತ್ಮ ಗಾಂಧೀಜಿ ಮರಿಮೊಮ್ಮಗಳು ಆಶಿಶ್‌ ಲತಾರಾಮ್‌ ಗೋಬಿನ್‌ ಅವರಿಗೆ ದಕ್ಷಿಣ ಆಫ್ರಿಕಾ ನ್ಯಾಯಾಲಯವೊಂದು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ದಕ್ಷಿಣ ಆಫ್ರಿಕಾದ ಡರ್ಬಾನ್‌ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ.

ಉದ್ಯಮಿಯೊಬ್ಬರಿಗೆ ೩.೨೨ ಕೋಟಿ ರೂ. ವಂಚಿಸಿದ ಆರೋಪ ಆಶಿಶ್‌ ಲತಾ ಅವರ ಮೇಲಿತ್ತು. ಈ ಬಗ್ಗೆ ೨೦೧೫ರಲ್ಲಿ ಪ್ರಕರಣ ದಾಖಲಾಗಿತ್ತು. ಇಳಾ ಗಾಂಧಿ ಮತ್ತು ಮೇವಾರಾಮ್‌ ಗೋಬಿನ್‌ ಪುತ್ರಿಯಾದ ಆಶಿಶ್‌ ಲತಾ ನ್ಯೂ ಆಫ್ರಿಕಾ ಅಲೈನ್ಸ್‌ ಕಂಪೆನಿ ನಿರ್ದೇಶಕ ಮಹಾರಾಜ್‌ ಅವರಿಗೆ ಭಾರತದಿಂದ ಮೂರು ಕಂಟೇನರ್‌ ಲಿನನ್‌ ಬಟ್ಟೆಗಳನ್ನು ಕಳುಹಿಸುವುದಾಗಿ ಹೇಳಿ ವಂಚಿಸಿದ್ದಾರೆ ಎಂಬ ಆರೋಪವಿತ್ತು.

ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಶಿಶ್ ಲತಾಗೆ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.

Join Whatsapp
Exit mobile version