Home ಟಾಪ್ ಸುದ್ದಿಗಳು ರಾಜ್ ಕೋಟ್ ಅಗ್ನಿ ದುರಂತದಲ್ಲಿ ಗೇಮ್ ಝೋನ್ ಮಾಲೀಕ ಕೂಡ ಸಾವು

ರಾಜ್ ಕೋಟ್ ಅಗ್ನಿ ದುರಂತದಲ್ಲಿ ಗೇಮ್ ಝೋನ್ ಮಾಲೀಕ ಕೂಡ ಸಾವು

ರಾಜ್ ಕೋಟ್ ಟಿಆರ್ ಪಿ ಗೇಮ್ ಝೋನ್ ನ ಮಾಲೀಕ ಪ್ರಕಾಶ್ ಹಿರಾನ್ ಕೂಡ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಆಟದ ವಲಯದಲ್ಲಿ ಪತ್ತೆಯಾದ ಅವಶೇಷಗಳಿಂದ ತೆಗೆದ ಡಿಎನ್ ಎ ಮಾದರಿಯು ಪ್ರಕಾಶ್ ಅವರ ತಾಯಿಯ ಡಿಎನ್ ಎ ಜತೆ ಹೊಂದಿಕೆಯಾಗಿದೆ.


ಪ್ರಕಾಶ್ ಹಿರನ್ ಅವರು ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದಾರೆ. ಪ್ರಕಾಶ್ ಸಹೋದರ ಜಿತೇಂದ್ರ ಪೊಲೀಸರಿಗೆ ಮನವಿ ಮಾಡಿದ್ದರು. ಬೆಂಕಿ ಅವಘಡದ ನಂತರ ಪ್ರಕಾಶ್ ಹಾಗೂ ತಮ್ಮ ಕುಟುಂಬಕ್ಕೆ ಯಾವುದೇ ಸಂಪರ್ಕವಿರಲಿಲ್ಲ, ಎಲ್ಲಾ ಫೋನ್ ಸ್ವಿಚ್ಡ್ ಆಫ್ ಬರುತ್ತಿದೆ, ಘಟನೆ ನಡೆದ ಸ್ಥಳದಲ್ಲಿ ಪ್ರಕಾಶ್ ಅವರ ಕಾರು ಕೂಡ ಇದೆ ಎಂದು ಹೇಳಿದ್ದರು. ಪ್ರಕಾಶ್ ಸಹೋದರನ ಮನವಿ ಮೇರೆಗೆ ಕುಟುಂಬದಿಂದ ಡಿಎನ್ ಎ ಮಾದರಿಯನ್ನು ತೆಗೆದುಕೊಳ್ಳಲಾಗಿತ್ತು. ಮೃತದೇಹ ಪ್ರಕಾಶ್ ಅವರದ್ದೇ ಎಂದು ಡಿಎನ್ಎ ಪರೀಕ್ಷೆ ಮೂಲಕ ತಿಳಿದುಬಂದಿದೆ.

Join Whatsapp
Exit mobile version