Home ಟಾಪ್ ಸುದ್ದಿಗಳು ನೂಪುರ್ ಶರ್ಮಾಗೆ ಗಂಭೀರ್ ಬೆಂಬಲ : ಜಾತ್ಯತೀತರ ಮೌನ ಕೆಣಕಿದ ಮಾಜಿ‌ ಕ್ರಿಕೆಟಿಗ

ನೂಪುರ್ ಶರ್ಮಾಗೆ ಗಂಭೀರ್ ಬೆಂಬಲ : ಜಾತ್ಯತೀತರ ಮೌನ ಕೆಣಕಿದ ಮಾಜಿ‌ ಕ್ರಿಕೆಟಿಗ

ನವದೆಹಲಿ: ಮಾಜಿ ಕ್ರಿಕೆಟಿಗ ಮತ್ತು ಪೂರ್ವ ದೆಹಲಿ ಸಂಸದ ಗೌತಮ್ ಗಂಭೀರ್ ನೂಪುರ್ ಶರ್ಮಾ ಬೆಂಬಲಕ್ಕೆ ನಿಂತು ಕಣಕ್ಕಿಳಿದಿದ್ದಾರೆ. ಪ್ರವಾದಿ ನಿಂದಗಾಗಿ ಅಮಾನತುಗೊಂಡ ಬಿಜೆಪಿ ರಾಷ್ಟ್ರೀಯ ನಾಯಕಿಗೆ ಗಂಭೀರ್ ಬೆಂಬಲ ವ್ಯಕ್ತಪಡಿಸಿದ್ದು ದ್ವೇಷ ಪ್ರದರ್ಶಿಸುವ ಜಾತ್ಯಾತೀರ ಉದಾರವಾದಿಗಳು ಎಂದು ಹೇಳಿಕೊಳ್ಳುವವರು ಈಗ ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಅಕೆಯ ಹೇಳಿಕೆಯನ್ನು ನಾನು ಬೆಂಬಲಿಸುವುದಿಲ್ಲ. ಆದರೆ ಆಕೆಯ ವಿರುದ್ಧ ಪಕ್ಷ ನಿರ್ಧಾಕ್ಷಿಣ್ಯ ಕ್ರಮ ಕೈಗೊಂಡು ಅವರು ಬೇಷರತ್ ಕ್ಷಮೆಯಾಚಿಸಿದ ನಂತರ ಈ ರೀತಿಯಾದಂತಹ ಪ್ರತಿಭಟನೆಗಳು ಸಲ್ಲದು ಎಂದು ಗಂಭೀರ್ ಹೇಳಿದ್ದಾರೆ. ವಿವಿಧ ರಾಜ್ಯಗಳಲ್ಲಿನ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಅವರು ಅಸಹಿಷ್ಣುತೆ ಎಂದು ಕರೆಯಲ್ಪಡುವ ನಮ್ಮ ಪಕ್ಷವನ್ನು ದೂಷಿಸುವ ಆ ಜಾತ್ಯತೀತವಾದಿಗಳ ಮೌನ ಇನ್ನೂ ಆಶ್ಚರ್ಯಕವಾಗಿದೆ. ಗಲಭೆಕೋರರು ನಿರ್ಬಯವಾಗಿ ಮಾಡುತ್ತಿರುವ್ ಗಲಭೆಯಿಂದ ವೋಟ್ ಬ್ಯಾಂಕ್ ರಾಜಕಾರಣ ಸ್ಪಷ್ಟವಾಗುತ್ತದೆ ಎಂದು ದೂರಿದ್ದಾರೆ.

ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಯುಪಿ ಸರಕಾರ ತೆಗೆದುಕೊಂಡ ಕ್ರಮವನ್ನು ನಾನು ಪ್ರಶಂಸಿಸುತ್ತೇನೆ. 21 ಶತಮಾನದಲ್ಲಿ ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಕೂಡ ಗಂಭೀರ್ ಹೇಳಿದ್ದಾರೆ.

Join Whatsapp
Exit mobile version