ನವದೆಹಲಿ: ಚುನಾವಣಾ ಆಯೋಗದಿಂದ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಹೊಸ ಹೆಸರನ್ನು ಪಡೆದುಕೊಂಡಿದೆ. ಶರದ್ ಪವಾರ್ ಅವರ ಬಣ ಇನ್ನು ಮುಂದೆ ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್ಚಂದ್ರ ಪವಾರ್’ ಎಂದು ಗುರುತಿಸಿಕೊಳ್ಳಲಿದೆ. ತಮ್ಮ ರಾಜಕೀಯ ಬಣಕ್ಕೆ ಮೂರು ಸಂಭಾವ್ಯ ಹೆಸರುಗಳು ಹಾಗೂ ಚಿನ್ಹೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಕೆಲವೇ ಹೊತ್ತಿನಲ್ಲಿ ಆಯೋಗ ಈ ಹೆಸರು ನೀಡಿದೆ. ಫೆಬ್ರವರಿ 27 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯ ಉದ್ದೇಶಕ್ಕಾಗಿ ಈ ಹೆಸರನ್ನು ಇಡಲಾಗಿದೆ.
ಅಜಿತ್ ಪವಾರ್ ಬಣವೇ ‘ನಿಜವಾದ ಎನ್‌ಸಿಪಿ’ ಎಂದು ಚುನಾವಣಾ ಆಯೋಗ ಮಂಗಳವಾರ ಘೋಷಿಸಿದ ನಂತರ ಶರದ್ ಪವಾರ್ ಬಣಕ್ಕೆ ಅವರ ರಾಜಕೀಯ ಬಣಕ್ಕೆ ಹೊಸ ಹೆಸರುಗಳನ್ನು ಸಲ್ಲಿಸುವಂತೆ ಕೇಳಲಾಯಿತು.
ಚುನಾವಣಾ ಆಯೋಗವು ಅಜಿತ್ ಪವಾರ್ ನೇತೃತ್ವದ ಗುಂಪಿಗೆ ಎನ್‌ಸಿಪಿ ಹೆಸರು ಹಾಗೂ ‘ಗಡಿಯಾರ’ದ ಚಿನ್ಹೆಯನ್ನು ನೀಡಿತ್ತು.