Home ಟಾಪ್ ಸುದ್ದಿಗಳು ದಕ್ಷಿಣ ಕನ್ನಡ: ಶನಿವಾರದಂದು ಶಾಲೆಗಳಲ್ಲಿ ಇಡೀ ದಿನ ತರಗತಿ

ದಕ್ಷಿಣ ಕನ್ನಡ: ಶನಿವಾರದಂದು ಶಾಲೆಗಳಲ್ಲಿ ಇಡೀ ದಿನ ತರಗತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಿನಿಂದ ಶನಿವಾರದಂದು ಪೂರ್ಣ ದಿನದ ತರಗತಿ ನಡೆಸಲು ನಿರ್ಧರಿಸಲಾಗಿದೆ. ಭಾರೀ ಮಳೆಗೆ ಘೋಷಿಸಿದ ರಜೆಗಳನ್ನು ಸರಿದೂಗಿಸಲು ಇಡೀ ದಿನ ಕ್ಲಾಸ್ ನಡೆಸಲು ತೀರ್ಮಾನಿಸಲಾಗಿದೆ.

ಆದರೆ ಸೆಪ್ಟೆಂಬರ್ ತಿಂಗಳಿನಿಂದ ಶನಿವಾರ ಇಡೀ ದಿನ ಶಾಲೆ ನಡೆಯಲಿದೆ ಎಂಬ ಸುಳ್ಯ ಬ್ಲಾಕ್ ಶಿಕ್ಷಣಾಧಿಕಾರಿ ಹೊರಡಿಸಿದ್ದ ಸುತ್ತೋಲೆಯನ್ನು ಸದ್ಯ ಹಿಂಪಡೆಯಲಾಗಿದೆ. ಇದುವರೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಏಳು ದಿನ (ಕೆಲವು ತಾಲೂಕುಗಳಲ್ಲಿ ಆರು) ಮಳೆ ರಜೆ ಘೋಷಿಸಿತ್ತು.

ಆದರೆ ಇತರೆ ಬಿಇಒಗಳು ಶನಿವಾರ ಪೂರ್ಣ ದಿನದ ತರಗತಿಗಳನ್ನು ಘೋಷಿಸದ ಕಾರಣ ಗೊಂದಲಕ್ಕೆ ಆಸ್ಪದ ನೀಡುತ್ತದೆ ಎಂದು ಡಿಡಿಪಿಐ ಸೂಚನೆ ನೀಡಿದರು. ಹೀಗಾಗಿ ಸುಳ್ಯ ಬಿಇಒ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ.

ಇನ್ನೂ ಮಳೆಗಾಲ ಮುಗಿಯದ ಕಾರಣ ಸುಳ್ಯ ಬಿಇಒ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ದಕ್ಷಿಣ ಕನ್ನಡ ಡಿಡಿಪಿಐ ಡಿ.ಆರ್.ನಾಯ್ಕ್ ತಿಳಿಸಿದ್ದಾರೆ. ಈ ತಿಂಗಳು ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಮಳೆ ಸೆಪ್ಟೆಂಬರ್ನಲ್ಲಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಒಂದು ಬಿಇಒ ಮಿತಿಯಲ್ಲಿ ಅಧಿಕೃತ ಆದೇಶವನ್ನು ಹೊರಡಿಸುವುದು ಇತರ ಪ್ರದೇಶಗಳಲ್ಲಿ ಗೊಂದಲವನ್ನು ಸೃಷ್ಟಿಸುತ್ತದೆ. ಸದ್ಯ ನಾವು ಸೆಪ್ಟೆಂಬರ್ ನಿಂದ ಪೂರ್ಣ ದಿನದ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ ಎಂದು ದಕ್ಷಿಣ ಕನ್ನಡ ಡಿಡಿಪಿಐ ಡಿ.ಆರ್.ನಾಯ್ಕ್ ತಿಳಿಸಿರುವುದಾಗಿ ವರದಿಯಾಗಿದೆ.

ಸೆಪ್ಟೆಂಬರ್ ತಿಂಗಳಿನಿಂದ ಶುರುವಾದ ಶನಿವಾರದ ಇಡೀ ದಿನದ ತರಗತಿಯನ್ನು ನವೆಂಬರ್ ತಿಂಗಳಲ್ಲಿ ಕೊನೆಗೊಳಿಸುತ್ತೇವೆ. ಮಳೆ ರಜೆಯನ್ನು ಸರಿದೂಗಿಸಲು ಏಕರೂಪದ ಕ್ಯಾಲೆಂಡರ್ ಜಾರಿಗೆ ತರುವುದು ಎಲ್ಲಾ ಗೊಂದಲಗಳನ್ನು ನಿವಾರಿಸುತ್ತದೆ. ಶಾಲೆಗಳು ಶೈಕ್ಷಣಿಕ ವರ್ಷದಲ್ಲಿ 224 ದಿನಗಳವರೆಗೆ ತರಗತಿಗಳನ್ನು ನಡೆಸಬೇಕಿದೆ ಡಿ.ಆರ್.ನಾಯ್ಕ್ ಮಾಹಿತಿ ನೀಡಿದ್ದಾರೆ.  

Join Whatsapp
Exit mobile version