Home ಟಾಪ್ ಸುದ್ದಿಗಳು FSL ವರದಿ ಸಲ್ಲಿಕೆಯಾದ ಕೂಡಲೇ ಸಾರ್ವಜನಿಕಗೊಳಿಸಲಾಗುವುದು: ಸಿದ್ದರಾಮಯ್ಯ

FSL ವರದಿ ಸಲ್ಲಿಕೆಯಾದ ಕೂಡಲೇ ಸಾರ್ವಜನಿಕಗೊಳಿಸಲಾಗುವುದು: ಸಿದ್ದರಾಮಯ್ಯ

ಹಾಸನ: ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಎಫ್ ಎಸ್ ಎಲ್ ವರದಿ ಬಂದ ಕೂಡಲೇ ಅದನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿದ್ದುಕೊಂಡು ಬೇರೆ ದೇಶದೆಡೆ ನಿಷ್ಠೆ ಪ್ರದರ್ಶಿಸುವ ಜನರನ್ನು ತಮ್ಮ ಸರ್ಕಾರ ಸಹಿಸಲ್ಲ, ದೇಶಭಕ್ತಿಯನ್ನು ಕಾಂಗ್ರೆಸ್ ಬಿಜೆಪಿಯಿಂದ ಕಲಿಯಬೇಕಿಲ್ಲ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಕಾಂಗ್ರೆಸ್ ನಾಯಕರ ಹೋರಾಟದಿಂದ, ಬಿಜೆಪಿ ನಾಯಕರ್ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಎಂದು ಹೇಳಿದರು.


ಈ ವಿಷಯವನನ್ನು ಅವರು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ, ಆದರೆ ಒಂದು ಪಕ್ಷ ಪಾಕ್ ಪರ ಘೋಷಣೆ ಕೂಗಿದ್ದು ಸಾಬೀತಾದರೆ ಕೂಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

Join Whatsapp
Exit mobile version