Home ಟಾಪ್ ಸುದ್ದಿಗಳು ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು FSL ವರದಿಯಲ್ಲಿ ಬಹಿರಂಗ: ಪರಮೇಶ್ವರ್

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು FSL ವರದಿಯಲ್ಲಿ ಬಹಿರಂಗ: ಪರಮೇಶ್ವರ್

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ವಿಧಿ ವಿಜ್ಞಾನ ಪ್ರಯೋಗಾಲಯ (FSL) ವರದಿಯಲ್ಲಿ ದೃಢವಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಮತ್ತು ವರದಿಯಲ್ಲಿ ಯಾರು ಕೂಗಿದ್ದಾರೆಂಬುವುದು ಬಹಿರಂಗೊಂಡಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಿಂದ ಸರ್ಕಾರಕ್ಕೆ ಯಾವುದೇ ಮುಜುಗರವಾಗುವುದಿಲ್ಲ. ಇದನ್ನು ನಮ್ಮ ಸರ್ಕಾರ ಹೇಳಿ ಮಾಡಿಸಿರುವುದು ಅಲ್ಲ. ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಂಡಿದ್ದೇವೆ ಎಂದರು.


ನಾನು ಹೇಳುತ್ತಿದ್ದೆ ಎಫ್ಎಸ್ಎಲ್ ವರದಿ ಬರಲಿ ಕ್ರಮ ಕೈಗೊಳ್ಳುತ್ತೇವೆ ಅಂತ. ಖಾಸಗಿಯವರು ಕೂಡ ಎಫ್ ಎಸ್ ಎಲ್ ವರದಿ ಬಿಡುಗಡೆ ಮಾಡಿದ್ದರು. ಆದರೆ ಇದನ್ನು ಅಧಿಕೃತ ಅಂತ ಹೇಳಲು ಆಗಲ್ಲ. ನಮ್ಮ ಗೃಹ ಇಲಾಖೆಯ ಎಫ್ ಎಸ್ ಎಲ್ ವರದಿ ಆಧಾರದ ಮೇಲೆ ಬಂಧನ ಮಾಡಿದ್ದೇವೆ. ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

Join Whatsapp
Exit mobile version