ಡಿಸೆಂಬರ್ 1ರಿಂದ ಭಾರತದಿಂದ ಸೌದಿ ಅರೇಬಿಯಾಗೆ ನೇರ ವಿಮಾನಯಾನ ಸೇವೆ ಪುನರಾರಂಭ

Prasthutha|

ರಿಯಾದ್: ಕೋವಿಡ್ ಕಾರಣದಿಂದಾಗಿ ಭಾರತದಿಂದ ಬರುವ ವಿಮಾನಗಳಿಗೆ ಸೌದಿ ಅರೇಬಿಯಾ ದೇಶವು ಹೇರಿದ್ದ ನಿಯಂತ್ರಣವು ನವೆಂಬರ್ ಅಂತ್ಯಕ್ಕೆ ಕೊನೆಗೊಳ್ಳಲಿದೆ ಎಂದು ಸೌದಿ ಗಝೆಟ್ ಟ್ವಿಟರ್’ನಲ್ಲಿ ತಿಳಿಸಿದೆ.

- Advertisement -

ಡಿಸೆಂಬರ್ 1, ಬುಧವಾರದಿಂದ ಭಾರತ ಸೇರಿದಂತೆ ಪಾಕಿಸ್ತಾನ, ಬ್ರೆಝಿಲ್, ವಿಯೆಟ್ನಾಂ,ಇಜಿಪ್ಟ್ ಇಂಡೋನೇಷ್ಯಾ ದೇಶಗಳಿಂದ ಸೌದಿ ಅರೇಬಿಯಾಗೆ ನೇರವಾಗಿ ವಿಮಾನಯಾನ ಸೇವೆಗಳು ಪ್ರಾರಂಭವಾಗಲಿದೆ. ಈ ದೇಶಗಳಿಂದ ಬರುವವರಿಗೆ ಸೌದಿಯಲ್ಲಿ  5 ದಿನಗಳ ಕಾಲ ಕಡ್ಡಾಯ ಸಾಂಸ್ಥಿಕ ಸಂಪರ್ಕತಡೆ (INSTITUTIONAL QUARANTINE) ಕಡ್ಡಾಯವಾಗಿದೆ

ಕೋವಿಡ್ ಕಾರಣದಿಂದಾಗಿ ಭಾರತದಿಂದ ಸೌದಿ ಅರೇಬಿಯಾ ದೇಶಕ್ಕೆ ನೇರವಾಗಿ ತೆರಳುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು.

- Advertisement -

 ಸದ್ಯ, ಯುಎಇ, ಮಾಲ್ಡೀವ್ಸ್ ಸೇರಿದಂತೆ ಕೆಲ ಅನುಮತಿ ಪಡೆದ ರಾಷ್ಟ್ರಗಳಲ್ಲಿ ನಿರ್ಧಿಷ್ಟ ದಿವಸಗಳ ಕ್ವಾರೆಂಟೈನ್ ಪೂರ್ತಿಗೊಳಿಸಿದ ಬಳಿಕವಷ್ಟೇ ಸೌದಿ ಅರೇಬಿಯಾಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಉದ್ಯೋಗ ಸೇರಿದಂತೆ ಇನ್ನಿತರ ಆವಶ್ಯಕತೆಗಳಿಗಾಗಿ ತೆರಳುವವರು ಸುತ್ತಿ ಬಳಸಿ ಸೌದಿ ಪ್ರವೇಶಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

Join Whatsapp