Home ಟಾಪ್ ಸುದ್ದಿಗಳು ಪತ್ರಕರ್ತರ ಮೇಲೆ ಪೆಗಾಸಸ್ ‘ಕಣ್ಗಾವಲು’: ಫ್ರೆಂಚ್ ಸರ್ಕಾರದಿಂದ ತನಿಖೆಗೆ ಆದೇಶ

ಪತ್ರಕರ್ತರ ಮೇಲೆ ಪೆಗಾಸಸ್ ‘ಕಣ್ಗಾವಲು’: ಫ್ರೆಂಚ್ ಸರ್ಕಾರದಿಂದ ತನಿಖೆಗೆ ಆದೇಶ

ಪ್ಯಾರಿಸ್, ಜು.20: ಫ್ರೆಂಚ್ ನ ಹಲವು ಪತ್ರಕರ್ತರ ಮೇಲೆ ಮೊರಕ್ಕೋ ಗುಪ್ತಚರ ಇಲಾಖೆ, ಇಸ್ರೇಲ್ ನ ಪೆಗಾಸಸ್ ‘ಕಣ್ಗಾವಲು’ ಇಟ್ಟಿತ್ತು ಎಂಬ ಆರೋಪದ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಪ್ಯಾರಿಸ್ ಪ್ರಾಸಿಕ್ಯೂಟರ್ಸ್ ಮಂಗಳವಾರ ಹೇಳಿದ್ದಾರೆ.


ವೈಯಕ್ತಿಕ ಗೌಪ್ಯತೆ ಉಲ್ಲಂಘನೆ, ವೈಯಕ್ತಿಕ ಎಲೆಕ್ಟ್ರಾನಿಕ್ ಸಾಧನಗಳಿಗೆ ಅಕ್ರಮ ಪ್ರವೇಶ, ಮತ್ತು ಕ್ರಿಮಿನಲ್ ಸಹಭಾಗಿತ್ವ ಸೇರಿದಂತೆ 10 ವಿವಿಧ ಆರೋಪಗಳ ಬಗ್ಗೆ ತನಿಖೆ ನಡೆಯಲಿದೆ.
ಫ್ರೆಂಚ್ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಭಾರತದಲ್ಲೂ ಇಂತಹ ಪ್ರಕರಣದ ಬಗ್ಗೆ ತನಿಖೆಗೆ ಒತ್ತಾಯ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಲವರು ತನಿಖೆಗೆ ಆಗ್ರಹಿಸಿದ್ದಾರೆ.

Join Whatsapp
Exit mobile version