Home ಟಾಪ್ ಸುದ್ದಿಗಳು ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಬ್ಯಾನರ್ ಹರಿದ ಕಿಡಿಕೇಡಿಗಳು; ಪುನೀತ್ ಕೆರೆಹಳ್ಳಿ, ಪುಂಡರಿಂದ ಹುತಾತ್ಮನಿಗೆ ಅವಮಾನ

ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಬ್ಯಾನರ್ ಹರಿದ ಕಿಡಿಕೇಡಿಗಳು; ಪುನೀತ್ ಕೆರೆಹಳ್ಳಿ, ಪುಂಡರಿಂದ ಹುತಾತ್ಮನಿಗೆ ಅವಮಾನ

►ಮಕ್ಕಳನ್ನು ಅಡವಿಟ್ಟ ಟಿಪ್ಪುವಿನ ಚರಿತ್ರೆ ಅಳಿಸೋಕಾಗಲ್ಲ ಎಂದ ಡಿ.ಕೆ.ಶಿವಕುಮಾರ್

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಕೆಪಿಸಿಸಿ ಆಯೋಜಿಸಿದ್ದ ‘ಕಾಂಗ್ರೆಸ್ ನಡಿಗೆ’ ಕಾರ್ಯಕ್ರಮ ನಿಮಿತ್ತ ಬೆಂಗಳೂರಿನ ಹಡ್ಸನ್ ವೃತ್ತ, ಕೆ ಆರ್ ಸರ್ಕಲ್ ನಲ್ಲಿ ಅಳವಡಿಸಿದ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಬ್ಯಾನರನ್ನು ರಾತ್ರೋರಾತ್ರಿ ಕಿಡಿಕೇಡಿಗಳು ಹರಿದು ಹಾಕಿದ್ದಾರೆ.

ಪುನೀತ್ ಕೆರೆಹಳ್ಳಿ ಮತ್ತು ಆತನ ಪುಂಡರು ಸೇರಿ ಟಿಪ್ಪು ಸುಲ್ತಾನ್ ಭಿತ್ತಿಚಿತ್ರಕ್ಕೆ ಹಾನಿ ಮಾಡಿದ್ದು, ಸ್ವಾತಂತ್ರ್ಯ ಹೋರಾಟಗಾರ ಟಿಪ್ಪುಗೆ ಅವಮಾನ ಮಾಡಿದ್ದಾರೆ. ಮಧ್ಯರಾತ್ರಿ ಬ್ಯಾನರ್ ಹರಿದು ಹಾಕಿದ್ದಾರೆ. ಪುನೀತ್ ಕೆರೆಹಳ್ಳಿ ಮಾತನಾಡಿ, ಶಿವಮೊಗ್ಗದಲ್ಲಿ ಸಾವರ್ಕರ್ ಚಿತ್ರವನ್ನು ಹರಿದು ಹಾಕಿದ್ದಾರೆ ಅದಕ್ಕೆ ಪ್ರತೀಕಾರವಾಗಿ ಇದನ್ನು ಹರಿಯುತ್ತಿದ್ದೇವೆ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ ಎಂದು ಆರೋಪಿಸಿದ್ದಾನೆ.

ಸುದ್ದಿ ತಿಳಿದ ತಕ್ಷಣ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಸಂಸದ ಡಿ ಕೆ ಸುರೇಶ್, ಮುಖಂಡರಾದ ವಿನಯ್ ಕಾರ್ತಿಕ್, ಹನುಮಂತರಾಯಪ್ಪ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಕಿಡಿಗೇಡಿಗಳನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದರು.


ಈ ಬಗ್ಗೆ ಪ್ರತಿಕ್ರಯಿಸಿದ ಡಿ ಕೆ ಶಿವಕುಮಾರ್, ಸ್ವಾತಂತ್ರ್ಯಕ್ಕಾಗಿ ಎಲ್ಲಾ ಜಾತಿ ಧರ್ಮದವರು ಹೋರಾಟ ಮಾಡಿದ್ದಾರೆ. ದೇಶದ ಚರಿತ್ರೆಯನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಕಿಡಿಕೇಡಿಗಳು ರಾಷ್ಟ್ರ ಹೋರಾಟಗಾರನಿಗೆ ಅವಮಾನ ಮಾಡಿದ್ದಾರೆ. ಕೇಂದ್ರ ಸರಕಾರವೇ ಟಿಪ್ಪುಗೆ ಗೌರವ ನೀಡಿದೆ. ಕೇಂದ್ರಸರಕಾರದ ಪುರಾತತ್ವ ಇಲಾಖೆ ಟಿಪ್ಪು ಪ್ಯಾಲೇಸ್ ನಲ್ಲಿ ಟಿಪ್ಪುವನ್ನು ಕೊಂಡಾಡುತ್ತಿದ್ದಾರೆ. ಅದನ್ನು ತಡೆಯಲು ಈ ಕಿಡಿಕೇಡಿಗಳಿಗೆ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ

Join Whatsapp
Exit mobile version