ಬೆಂಗಳೂರು: ಖುದ್ದಾಮುಲ್ ಉಲಮಾ ವೆಲ್ಫೇರ್ ಫೌಂಡೇಶನ್ ವತಿಯಿಂದ ಉಮ್ರಾ ಮೆಕ್ಕಾ ಯಾತ್ರೆ ಕೈಗೊಳ್ಳುವ ರಾಜ್ಯ ಹಾಗೂ ಹೊರ ರಾಜ್ಯದವರು ಸೇರಿ ಒಟ್ಟು ಇಪ್ಪತ್ತು ಮಂದಿಗೆ ಹಣಕಾಸು, ಸಾಮಗ್ರಿಗಳ ನೆರವು ನೀಡುವ ಮೂಲಕ ಬೀಳ್ಕೊಡಲಾಯಿತು.
ಚಿಕ್ಕನಾಯಕನಹಳ್ಳಿ ಮೂಲದ ಬೆಂಗಳೂರು ಉದ್ಯಮಿ ಹಫೀಝುಲ್ಲಾ ಷರೀಫ್ ಅವರ ಖುದ್ದಾಮುಲ್ ಉಲಮಾ ವೆಲ್ಫೇರ್ ಫೌಂಡೇಶನ್ ಮೂಲಕ ಉಚಿತವಾಗಿ ಬಡ ಹಾಗೂ ಮಧ್ಯಮ ವರ್ಗದ ಮುಸ್ಲಿಂ ಸಮುದಾಯದವರನ್ನು ಗುರುತಿಸಿ ಮೆಕ್ಕಾ ಉಮ್ರಾ ಯಾತ್ರೆಗೆ ಕಳುಹಿಸಲಾಗುತ್ತದೆ. ಇದು ಎರಡನೇ ಉಚಿತ ಉಮ್ರಾ ಯಾತ್ರೆಯಾಗಿದ್ದು. ಕಳೆದ ಅಕ್ಟೋಬರ್’ನಲ್ಲಿ 16 ಮಂದಿಯನ್ನು ಕಳುಹಿಸಲಾಗಿತ್ತು. ಎರಡನೇ ಯಾತ್ರೆಯಲ್ಲಿ ಬಿಹಾರ, ಕೋಲಾರ, ಮೈಸೂರು, ಬೆಂಗಳೂರು ಸೇರಿ ಒಟ್ಟು ಇಪ್ಪತ್ತು ಮಂದಿಯನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಕಳುಹಿಸಲಾಗುತ್ತದೆ.
ಉಮ್ರಾ ಯಾತ್ರಾರ್ಥಿಗಳಿಗೆ ಬ್ಯಾಗ್, ಶಾಲು ವಿತರಿಸಿ ಮಾತನಾಡಿದ ಫೌಂಡೇಶನ್ ಅಧ್ಯಕ್ಷ ಹಫೀಝುಲ್ಲಾ ಷರೀಫ್, ನಮ್ಮ ಸಂಸ್ಥೆ ಉದಯವಾಗಿ ಒಂದು ವರ್ಷ ನಾಲ್ಕು ತಿಂಗಳು ಕಳೆದಿದ್ದು, ಸರ್ಕಾರದ ಯಾವುದೇ ನೆರವಿಲ್ಲದೇ ನಮ್ಮ ದುಡಿಮೆಯ ಸ್ವತಃ ಖರ್ಚಿನಲ್ಲಿ ಕಳೆದ ಅಕ್ಟೋಬರ್’ನಲ್ಲಿ ಮೊದಲ ಬಾರಿಗೆ 16 ಮಂದಿಯನ್ನು ಯಾತ್ರೆಗೆ ರವಾನಿಸಲಾಗಿತ್ತು. ಈಗ ಇಪ್ಪತ್ತು ಮಂದಿಯನ್ನು ಕಳುಹಿಸಲಾಗುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ವಿಸಾ ಅನುಮತಿ ಸಿಕ್ಕ ತಕ್ಷಣ ಆಯ್ಕೆ ಮಾಡಿ ಕಳುಹಿಸಲಾಗುವುದು.
ರಂಜಾನ್ ಸಂದರ್ಭದಲ್ಲಿ ಸುಮಾರು 15ಸಾವಿರ ಪುಡ್ ಕಿಟ್ ಗಳನ್ನು ಹಂಚಲಾಯಿತು. ಕೊರಾನಾ ಸಂದರ್ಭದಲ್ಲಿ 18ಸಾವಿರ ಪುಡ್ ಕಿಟ್ ಗಳನ್ನು ವಿತರಿಸಲಾಗಿತ್ತು ಎಂದು ತಿಳಿಸಿದರು.