Home ಕರಾವಳಿ ಅಲ್ ಅಮೀನ್ ಹೆಲ್ಪ್ ಲೈನ್ ವತಿಯಿಂದ ಸಂಕಷ್ಟದಲ್ಲಿರುವವರಿಗೆ ಉಚಿತ ಊಟ ವಿತರಣೆ

ಅಲ್ ಅಮೀನ್ ಹೆಲ್ಪ್ ಲೈನ್ ವತಿಯಿಂದ ಸಂಕಷ್ಟದಲ್ಲಿರುವವರಿಗೆ ಉಚಿತ ಊಟ ವಿತರಣೆ


ಮೂಡಬಿದಿರೆ: ಅಲ್ ಅಮೀನ್ ಹೆಲ್ಪ್ ಲೈನ್ ಸಂಘಟನೆಯು ಕಳೆದ 20 ದಿನಗಳಿಂದ ಮೂಡಬಿದಿರೆಯಲ್ಲಿ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿದವರಿಗೆ ಉಚಿತ ಊಟ ನೀಡುವುದರ ಜೊತೆಗೆ ವಿವಿಧ ಸಾಮಾಜಿಕ ಕಾರ್ಯಗಳನ್ನ ನಡೆಸುತ್ತಾ ಬಂದಿದೆ. ಪ್ರಮುಖವಾಗಿ ನಿರಾಶ್ರಿತರು, ಪೌರ ಕಾರ್ಮಿಕರು, ವಾಹನ ಚಾಲಕರು ಹಾಗೂ ಆಸ್ಪತ್ರೆ ಸಿಬ್ಬಂದಿ, ರೋಗಿಗಳಿಗೆ ಉಚಿತ ಊಟ, ನೀರು ಹಾಗೂ ಮಾಸ್ಕ್ ಗಳನ್ನ ವಿತರಿಸುತ್ತಾ ಬಂದಿದೆ.


ಇನ್ನು ಕೋವಿಡ್ ರೋಗಿಗಳಿಗೆ ಬೇಕಾದ ಉಚಿತ ಔಷಧ ಹಾಗೂ ಬೆಡ್ ವ್ಯವಸ್ಥೆ ಕಲ್ಪಿಸಲು ಮೂಡಬಿದಿರೆಯ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರದಲ್ಲಿ ಡಾ.ಮೋಹನ್ ಆಳ್ವ ಅವರು ನೀಡುತ್ತಿರುವ ಉಚಿತ ವೈದ್ಯಕೀಯ ನೆರವಿನ ಬಗ್ಗೆ ಮಾಹಿತಿ ಪಡೆದು ಅದನ್ನ ಸಾರ್ವಜನಿಕರಿಗೆ ಒದಗಿಸುವ ಕೆಲಸವನ್ನೂ ಮಾಡುತ್ತಿದೆ.


ಅಲ್ಲದೇ, ಪ್ರತಿದಿನ ಮೂಡಬಿದಿರೆ ಆಸುಪಾಸಿನ ಮಂದಿ ಊಟದ ಅಗತ್ಯವಿದ್ದಲ್ಲಿ ಮಧ್ಯಾಹ್ನದ ಒಳಗಾಗಿ ತಮ್ಮನ್ನ ಸಂಪರ್ಕಿಸುವಂತೆ ಜಾಲತಾಣದ ಮೂಲಕ ಪ್ರಚುರಪಡಿಸಿ ಸಾಮಾಜಿಕ ಕಾರ್ಯದಲ್ಲಿ ಹೆಲ್ಪ್ ಲೈನ್ ನ ಸದಸ್ಯರು ತೊಡಗಿಸಿಕೊಂಡಿದ್ದಾರೆ.
ಸಂಘಟನೆಯ ಪದಾಧಿಕಾರಿಗಳಾದ ಅಬ್ದುಲ್ ಸಮದ್, ಅಡ್ವಕೇಟ್ ಇರ್ಷಾದ್ ಎನ್.ಜಿ., ನಿಫಾಲ್, ವಝೀರ್, ಅಝ್ವೀರ್, ಅಶ್ರಫ್ ಮತ್ತಿತ್ತರರು ನೇತೃತ್ವವನ್ನ ವಹಿಸಿಕೊಂಡಿದ್ದಾರೆ.

Join Whatsapp
Exit mobile version