Home ಗಲ್ಫ್ ಅಬುಧಾಬಿ ಸರ್ಕಾರದಿಂದ ಪ್ರವಾಸಿಗರಿಗೆ ಉಚಿತ ಕೋವಿಡ್ ಲಸಿಕೆ

ಅಬುಧಾಬಿ ಸರ್ಕಾರದಿಂದ ಪ್ರವಾಸಿಗರಿಗೆ ಉಚಿತ ಕೋವಿಡ್ ಲಸಿಕೆ

ದುಬೈ: ಯುನೈಟೆಡ್‌ ಅರಬ್‌ ಎಮಿರೇಟ್ಸ್ (ಯುಎಇ) ರಾಜಧಾನಿ ಅಬುಧಾಬಿಯು ಪ್ರವಾಸಿಗರಿಗೆ ಉಚಿತ ಲಸಿಕೆಯನ್ನು ನೀಡುವುದಾಗಿ ಪ್ರಕಟಿಸಿದೆ.

ಈ ಹಿಂದೆ ಕೇವಲ ಯುಎಇ ನಾಗರಿಕರು ಮತ್ತು ‘ರೆಸಿಡೆನ್ಸಿ ವೀಸಾ’ ಹೊಂದಿದವರಿಗೆ ಮಾತ್ರ ಉಚಿತವಾಗಿ ಲಸಿಕೆ ನೀಡಲಾಗುತ್ತಿತ್ತು. ಈ ಹೊಸ ಬದಲಾವಣೆ ಅಬುಧಾಬಿಗೆ ಮಾತ್ರ ಸೀಮಿತವಾಗಿದೆಯೇ ಅಥವಾ ಇತರೆ ಐದು ಎಮಿರೇಟ್ಸ್ ಗೆ ಅನ್ವಯಿಸುತ್ತದೆಯೇ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ.

ಅಬುಧಾಬಿ ಅನುಮೋದನೆ ನೀಡಿರುವ ವೀಸಾ ಮತ್ತು ಪಾಸ್‌ಪೋರ್ಟ್‌ಗಳನ್ನು ಹೊಂದಿರುವವರು ಉಚಿತ ಲಸಿಕೆಗೆ ಅರ್ಹರು ಎಂದು ಅಬುಧಾಬಿ ಆರೋಗ್ಯ ಸೇವೆಗಳ ಕಂಪನಿ (ಎಸ್‌ಇಎಚ್‌ಎ) ಹೇಳಿದೆ.

ಅವಧಿ ಮುಗಿದ ವೀಸಾ ಮತ್ತು ರೆಸಿಡೆನ್ಸಿ ವೀಸಾ ಹೊಂದಿರುವವರು ಕೂಡ ಉಚಿತ ಲಸಿಕೆ ಪಡೆಯಲು ಅರ್ಹರು ಎಂದು ಅಬುಧಾಬಿಯ ಮಾಧ್ಯಮ ಕಚೇರಿ ತಿಳಿಸಿದೆ.

Join Whatsapp
Exit mobile version