Home ಕರಾವಳಿ ಕರ್ನಾಟಕ ಬಂದ್’ಗೆ ಅಡ್ವೋಕೇಟ್ ಫ್ರಟೆರ್ನಿಟಿ ಫೋರಮ್ ಬೆಂಬಲ

ಕರ್ನಾಟಕ ಬಂದ್’ಗೆ ಅಡ್ವೋಕೇಟ್ ಫ್ರಟೆರ್ನಿಟಿ ಫೋರಮ್ ಬೆಂಬಲ

ಮಂಗಳೂರು: ಕರ್ನಾಟಕ ಹಿಜಾಬ್ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿಗೆ ವಿಷಾದ ವ್ಯಕ್ತಪಡಿಸಿ ಮಾರ್ಚ್ 17, ಗುರುವಾರದಂದು ಕರೆ ನೀಡಲಾಹಿರುವ ಕರ್ನಾಟಕ ಬಂದ್’ಗೆ ಅಡ್ವೋಕೇಟ್ ಫ್ರಟೆರ್ನಿಟಿ ಫೋರಮ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ಸಂಪೂರ್ಣ ಬೆಂಬಲ ಘೋಷಿಸಿದೆ.

ಕರ್ನಾಟಕ ಉಚ್ಛ ನ್ಯಾಯಾಲಯದ ಹಿಜಾಬ್ ಕುರಿತ ತೀರ್ಪುವಿನಲ್ಲಿ ಮುಸ್ಲಿಂ ಮಹಿಳೆಯರ ಮೂಲಭೂತ ಹಕ್ಕಾಗಿರುವ ಹಿಜಾಬ್ ಧರಿಸುವಿಕೆಯ ವಿರುದ್ಧವಾಗಿ ತ್ರೀಪೀಠ ಸದಸ್ಯ ನೀಡಿರುವ ತೀರ್ಪುವಿನಲ್ಲಿ ಇಸ್ಲಾಮಿನಲ್ಲಿ ಮುಸ್ಲಿಮ್ ಮಹಿಳೆಯರಿಗೆ ಹಿಜಾಬ್ ಮಹತ್ವವಲ್ಲ, ಮತ್ತು ಹಿಜಾಬ್ ಇಸ್ಲಾಮಿನಲ್ಲಿ ಅವಿಭಾಜ್ಯ ಅಂಗವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುವಿಕೆಯನ್ನು ವಿಮರ್ಶಿಸಿ ಕರ್ನಾಟಕಾದ್ಯಂತ ಮಾರ್ಚ್ 17 ರಂದು ಸ್ವಯಂ ಪ್ರೇರಿತ ವ್ಯವಹಾರ ಸ್ಥಗಿತಕ್ಕೆ ಕರೆ ನೀಡಲಾಗಿದ್ದು. ಈ ಶಾಂತಿಯುತ ಬಂದ್ ಕರೆಗೆ ಅಡ್ವೋಕೇಟ್ ಫ್ರಟೆರ್ನಿಟಿ ಫೋರಮ್ ದ.ಕ, ಮಂಗಳೂರು ಸಂಪೂರ್ಣ ಬೆಂಬಲ ಘೋಷಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Join Whatsapp
Exit mobile version