ಹೈದರಾಬಾದ್: ನಾಲ್ಕು ವರ್ಷದ ಗಂಡು ಮಗುವೊಂದು ತನ್ನ ತಂದೆ ಚಲಾಯಿಸಿದ ಕಾರಿನಡಿಗೆ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಹೈದರಾಬಾದಿನ LB ನಗರದಲ್ಲಿ ನಡೆದಿದೆ.
ಈ ದೃಶ್ಯ ಅಪಾರ್ಟ್’ಮೆಂಟ್ ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಂತಹಾ ಕಲ್ಲು ಹೃದಯವನ್ನೂ ಕರಗಿಸುವಂತಿದೆ.
ಮನ್ಸೂರಾಬಾದಿನ ವಸತಿ ಸಮುಚ್ಚಯದ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ್ ಅಪಾರ್ಟ್’ಮೆಂಟ್ ಹೊರಗೆ ಪಾರ್ಕ್ ಮಾಡಿದ್ದ ಎಸ್.ಯು.ವಿ ಕಾರನ್ನು ಚಲಾಯಿಸುತ್ತಿದ್ದಂತೆಯೇ ಆಡುತ್ತಾ ಕಾರಿನೆದುರು ಬಂದ ನಾಲ್ಕು ವರ್ಷದ ಗಂಡು ಮಗು ಸಾತ್ವಿಕ್, ಚಕ್ರದಡಿಗೆ ಸಿಲುಕಿ ಮೃತಪಟ್ಟಿದ್ದಾನೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.