Home ಟಾಪ್ ಸುದ್ದಿಗಳು ಗುಡಿಸಲಿಗೆ ನುಗ್ಗಿದ ಲಾರಿ: ಗರ್ಭಿಣಿ ಸೇರಿ ನಾಲ್ಕು ಮಂದಿ ಸಾವು

ಗುಡಿಸಲಿಗೆ ನುಗ್ಗಿದ ಲಾರಿ: ಗರ್ಭಿಣಿ ಸೇರಿ ನಾಲ್ಕು ಮಂದಿ ಸಾವು

ಅಯೋಧ್ಯೆ: ಲಾರಿಯೊಂದು ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿದ್ದ ಗುಡಿಸಲಿಗೆ ನುಗ್ಗಿದ ಪರಿಣಾಮ ಗರ್ಭಿಣಿ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಯೋಧ್ಯೆ ಹೆದ್ದಾರಿಯಲ್ಲಿರುವ ಬಿಬಿಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ಬಾರಾಬಂಕಿಯ ಜೈತ್‌ಪುರ ನಿವಾಸಿ ಉಮೇಶ್ (35) ಟೈಲ್ಸ್ ಕುಶಲಕರ್ಮಿ. ಅವರು ತಮ್ಮ ಪತ್ನಿ ನೀಲಂ (32), ಪುತ್ರರಾದ ಗೋಲು (4), ಸನ್ನಿ (13) ಮತ್ತು ಮಗಳು ವೈಷ್ಣವಿ ಅವರೊಂದಿಗೆ ಅಯೋಧ್ಯೆ ಹೆದ್ದಾರಿಯ ಗುಡಿಸಲಿನಲ್ಲಿ ವಾಸಿಸುತ್ತಿದ್ದರು.

ಇಡೀ ಕುಟುಂಬ ಗುಡಿಸಲಿನಲ್ಲಿ ಮಲಗಿದ್ದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಲಾರಿ ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿದೆ. ಅಪಘಾತದಲ್ಲಿ ಉಮೇಶ್, ನೀಲಂ, ಗೋಳು ಮತ್ತು ಸನ್ನಿ ಸಾವನ್ನಪ್ಪಿದ್ದಾರೆ. ವೈಷ್ಣವಿ ಮಾತ್ರ ಬದುಕುಳಿದರು.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ

Join Whatsapp
Exit mobile version