Home ಕರಾವಳಿ ಮಂಗಳೂರು | ಒಂದೇ ಮನೆಯ ನಾಲ್ವರದ್ದು ಆತ್ಮಹತ್ಯೆ ಯತ್ನವಲ್ಲ, ಪುಡ್ ಪಾಯಿಸನ್: ವೈದ್ಯರ ಸ್ಪಷ್ಟನೆ

ಮಂಗಳೂರು | ಒಂದೇ ಮನೆಯ ನಾಲ್ವರದ್ದು ಆತ್ಮಹತ್ಯೆ ಯತ್ನವಲ್ಲ, ಪುಡ್ ಪಾಯಿಸನ್: ವೈದ್ಯರ ಸ್ಪಷ್ಟನೆ

ಮಂಗಳೂರು: ನಗರದ ಜೆಪ್ಪು ಬಪ್ಪಲ್ ಮನೆಯೊಂದರಲ್ಲಿ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಪ್ರಕರಣದ ವಾಸ್ತವಾಂಶ ಬೆಳಕಿಗೆ ಬಂದಿದೆ.


ಅದು ಆತ್ಮಹತ್ಯೆ ಯತ್ನ ಅಲ್ಲ, ವಿಷಾಹಾರ ಸೇವನೆಯಿಂದ ನಡೆದ ದುರಂತ ಎಂಬುದನ್ನು ವೈದ್ಯರು ದೃಢಪಡಿಸಿದ್ದಾರೆ.


ಜೆಪ್ಪು ಬಪ್ಪಲ್ ನಿವಾಸಿ ಅರವಿಂದರಾವ್ (52), ಪ್ರಭಾವತಿ (45), ಸೌರಭ್ (20), ಪ್ರತೀಕ್ (18) ಅವರು ನಿನ್ನೆ ರಾತ್ರಿ ಹೆಸರು ಬೇಳೆ ಹಾಗೂ ಐಸ್ ಕ್ರಿಮ್ ತಿಂದು ಮಲಗಿದ್ದರು. ಆದರೆ ಇಂದು ಬೆಳಿಗ್ಗೆ ಯಾರು ಕೂಡ ಮನೆಯ ಬಾಗಿಲ ತೆಗೆಯದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರಾದ ಕೌಶಿಕ್, ಮಂಜುನಾಥ್, ಮತ್ತು ರೇಣುಕಾ ಅವರು ಮನೆಯ ಬಾಗಿಲು ತೆಗೆದು ನೋಡಿದಾಗ ಸ್ಥಳದಲ್ಲಿ ವಾಂತಿ ಮಾಡಿಕೊಂಡು,ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು. ಮೊದಲಿಗೆ ಅವರು ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಶಂಕಿಸಲಾಗಿತ್ತು. ತಕ್ಷಣ ಅವರೆಲ್ಲರನ್ನೂ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದಾಗ, ಅದು ಆತ್ಮಹತ್ಯೆಯಲ್ಲ, ವಿಷಾಹಾರ ಸೇವನೆಯಿಂದ ಇದು ಸಂಭವಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.


ಸದ್ಯ ಅವರೆಲ್ಲರೂ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version