Home ಟಾಪ್ ಸುದ್ದಿಗಳು ನನಗೂ ಸ್ವಲ್ಪ ಡ್ರಾಪ್ ಕೊಡಣ್ಣ ಪ್ಲೀಸ್: ಗಜರಾಜನ ವೀಡಿಯೋ ಸಖತ್ ವೈರಲ್

ನನಗೂ ಸ್ವಲ್ಪ ಡ್ರಾಪ್ ಕೊಡಣ್ಣ ಪ್ಲೀಸ್: ಗಜರಾಜನ ವೀಡಿಯೋ ಸಖತ್ ವೈರಲ್

ನವದೆಹಲಿ: ಆನೆಯೊಂದು ದಾರಿಯಲ್ಲಿ ಬರುತ್ತಿದ್ದ ಬಸ್ ಅನ್ನು ತಡೆದು ನಿಲ್ಲಿಸಿ ಡ್ರಾಪ್ ಕೇಳುವಂತೆ ವರ್ತಿಸಿದೆ. ಹಾಗೆ ಬಸ್ಸಿನ ಬಾಗಿಲನ್ನು ತೆರೆಯಲು ಪ್ರಯತ್ನಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.


ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಈ ವೀಡಿಯೊ ಟ್ವೀಟ್ ಮಾಡಿದ್ದು, ‘ ಇದು ದೀಪಾವಳಿ ಸಮಯ ನೋಡಿ. ಎಲ್ಲರಿಗೂ ಅವರವರ ಮನೆ ತಲುಪುವ ಅವಸರವಿರುತ್ತದೆ’ ಎಂದು ಬರೆದಿದ್ದಾರೆ.


ವೀಡಿಯೊದಲ್ಲಿ ಆನೆಯೊಂದು ದಾರಿಯಲ್ಲಿ ಹೋಗುತ್ತಿದ್ದ ಬಸ್ ಅನ್ನು ತಡೆದು ಬಸ್ ನ ಒಳಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದಾಗಿದೆ.

Join Whatsapp
Exit mobile version