ಇಸ್ರೇಲಿ ವೈಮಾನಿಕ ದಾಳಿಗೆ ‘ಅಲ್ ಜಝೀರಾ’ ಬ್ಯೂರೋ ಮುಖ್ಯಸ್ಥರ ಕುಟುಂಬದ ನಾಲ್ವರು ಮೃತ್ಯು

Prasthutha|

ಗಾಝಾ: ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಅಲ್ ಜಝೀರಾ ಅರೇಬಿಕ್ ಬ್ಯೂರೋ ಮುಖ್ಯಸ್ಥರ ಕುಟುಂಬದ ನಾಲ್ವರು ಸದಸ್ಯರು ಮೃತಪಟ್ದಿದ್ದಾರೆ.

- Advertisement -


ಗಾಝಾದಲ್ಲಿರುವ ಅಲ್ ಜಝೀರಾ ಅರೇಬಿಕ್ ಬ್ಯೂರೋ ಮುಖ್ಯಸ್ಥ ವೇಲ್ ದಹದೌಹ್ ಅವರ ಪತ್ನಿ, ಮಗ, ಮಗಳು ಮತ್ತು ಮೊಮ್ಮಗ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.


ಅಲ್ ಜಝೀರಾದಲ್ಲಿ ಪ್ರಸಾರವಾದ ವಿಡಿಯೋದಲ್ಲಿ ದಹದೌಹ್ ಅವರು, ಆಸ್ಪತ್ರೆಯಲ್ಲಿ ಕಣ್ಣೀರು ಹಾಕುತ್ತಾ, ತನ್ನ ಏಳು ವರ್ಷದ ಮಗಳ ಶವವನ್ನು ಹಿಡಿದುಕೊಂಡು ತನ್ನ ಹದಿಹರೆಯದ ಮಗನ ದೇಹದ ಮೇಲೆ ಮಂಡಿಯೂರಿ ಕುಳಿತಿರುವುದನ್ನು ತೋರಿಸಿದೆ.

Join Whatsapp